ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2024ರ ಜನವರಿ 10 ರಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ನೋಂದಣಿ ಪ್ರಕ್ರಿಯೆ ಆರಂಭಿಸಿದೆ.
ಜನವರಿ 10 ರಿಂದ ಫೆಬ್ರವರಿ 10, 2024 ರವರೆಗೆ ನೋಂದಣಿಗೆ ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು cetonline.karnataka.gov.in ಅಧಿಕೃತ ಪೋರ್ಟಲ್ ಮೂಲಕ ಕೆಸಿಇಟಿ ಪರೀಕ್ಷೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಕೆಇಎ 2024ರ ಏಪ್ರಿಲ್ 18 ಮತ್ತು 19ರಂದು ಕೆಸಿಇಟಿ ಪರೀಕ್ಷೆ ನಡೆಸಲಿದೆ. ಪ್ರವೇಶ ಪರೀಕ್ಷೆಗೆ ನೋಂದಾಯಿಸಲು ಅಭ್ಯರ್ಥಿಗಳು ತಮ್ಮ 12 ನೇ ತರಗತಿ ಅಥವಾ ಪಿಯುಸಿ ಉತ್ತೀರ್ಣರಾಗಿರಬೇಕು. ಶುಲ್ಕ ಪಾವತಿ ಸೇರಿದಂತೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕೆಸಿಇಟಿ ಪ್ರವೇಶ ಪತ್ರ 2024 ನೀಡಲಾಗುವುದು.
ಕೆಸಿಇಟಿ ನೋಂದಣಿ ದಿನಾಂಕ: ಜನವರಿ 10 ರಿಂದ ಫೆಬ್ರವರಿ 10, 2024
ಕೆಸಿಇಟಿ ಅರ್ಜಿ ನಮೂನೆ : ಆನ್ ಲೈನ್
ಕೆಸಿಇಟಿ ಪರೀಕ್ಷೆ ದಿನಾಂಕ: ಏಪ್ರಿಲ್ 18 ಮತ್ತು 19, 2024
ವಿದ್ಯಾರ್ಹತೆ: 12ನೇ ತರಗತಿ ಅಥವಾ ಪಿಯುಸಿ
ಅಧಿಕೃತ ವೆಬ್ಸೈಟ್ cetonline.karnataka.gov.in
ಏನೆಲ್ಲಾ ದಾಖಲೆಗಳು ಬೇಕು..?
ಆಧಾರ್ ಕಾರ್ಡ್
ಎಸ್ಎಸ್ಎಲ್ಸಿ ಅಂಕಪಟ್ಟಿ
ಜನ್ಮ ದಿನಾಂಕ ದಾಖಲೆ
ದ್ವಿತೀಯ ಪಿಯುಸಿ ಅಂಕಪಟ್ಟಿ
ಮೀಸಲಾತಿ ಕೋರುವವರು ಸಂಬಂಧಿಸಿದ ದಾಖಲೆ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಕೃಷಿ ಕೋಟಾದಡಿ ಮೀಸಲಾತಿ ಕೋರುವವರು ದಾಖಲೆ ನೀಡಬೇಕು
ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಕೆಸಿಇಟಿಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ cetonline.karnataka.gov.in
ಹಂತ 2: ಮುಖಪುಟದಲ್ಲಿ ಕೆಸಿಇಟಿ ಪರೀಕ್ಷೆ ವಿಂಡೋವನ್ನು ಹುಡುಕಿ
ಹಂತ 3: ಕೆಸಿಇಟಿ ನೋಂದಣಿ ಲಿಂಕ್ ಅನ್ನು ಸರ್ಚ್ ಮಾಡಿ
ಹಂತ 4: ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಕೆಸಿಇಟಿ ಅರ್ಜಿ ನಮೂನೆ ಓಪನ್ ಆಗುತ್ತದೆ.
ಹಂತ 5: ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳೊಂದಿಗೆ ಕೆಸಿಇಟಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
ಹಂತ 6: ಫೋಟೋ ಮತ್ತು ಸಹಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಹಂತ 7: ಅರ್ಜಿ ಶುಲ್ಕವನ್ನು ಪಾವತಿಸಿ
ಹಂತ 8: ಕೆಸಿಇಟಿ ಅರ್ಜಿ ನಮೂನೆಯನ್ನು ಸಲ್ಲಿಸಿ
ಹಂತ 9: ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ಔಟ್ ತೆಗೆದುಕೊಳ್ಳಿ.