
ಶಿವಮೊಗ್ಗ: ‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಲಕ್ಕಿ ಡ್ರಾ ಬಂದಿದೆ ಎಂದು ನಂಬಿಸಿ 1.43 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ತೀರ್ಥಹಳ್ಳಿಯ ಅನಂತಕುಮಾರ್ ಎಂಬುವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ‘ಕೌನ್ ಬನೇಗಾ ಕರೋಡ್ ಪತಿ’ ಲಕ್ಕಿ ಡ್ರಾದಲ್ಲಿ ನಿಮಗೆ 25 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಇದನ್ನು ಪಡೆಯಲು 1.43 ಲಕ್ಷ ರೂಪಾಯಿ ಕಟ್ಟಬೇಕಿದೆ ಎಂದು ಹೇಳಿದ್ದಾನೆ.
ಆತನ ಮಾತು ನಂಬಿದ ಅನಂತಕುಮಾರ್ ಹಂತಹಂತವಾಗಿ ಆತ ಹೇಳಿದ ಖಾತೆಗೆ ಹಣ ಪಾವತಿಸಿದ್ದಾರೆ. ಕೊನೆಗೆ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.