
ಅಮಿತಾಬ್ ಬಚ್ಚನ್ ಆತಿಥ್ಯದ ಕೌನ್ ಬನೇಗಾ ಕ್ರೋರ್‌ಪತಿಯ 13ನೇ ಸೀಸನ್ ದೇಶದಲ್ಲಿ ಅತ್ಯಂತ ಹೆಚ್ಚಾಗಿ ವೀಕ್ಷಿಸಲ್ಪಟ್ಟ ಶೋಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಶೋನ ಪ್ರೋಮೋದಲ್ಲಿ ದಿವ್ಯಾ ಸಹಾಯ್ ಹೆಸರಿನ ಸ್ಪರ್ಧಿಯೊಬ್ಬರೊಂದಿಗೆ ಫನ್ನಿ ಸಂವಾದ ನಡೆಸಿದ ಬಿಗ್ ಬಿ ರ ವಿಡಿಯೋವೊಂದು ನಟ್ಟಿಗರನ್ನು ಸೆಳೆಯುತ್ತಿದೆ.
ಗೆಳತಿಗೆ ಹೊಡೆದು ಬಿದ್ದು ಬಿದ್ದು ನಕ್ಕ ನಟಿ ಕಾಜೋಲ್ ಪುತ್ರಿ…!
ಸ್ಪರ್ಧಿಯೊಬ್ಬರನ್ನು ತಮ್ಮ ಚಿತ್ರಗಳನ್ನು ವೀಕ್ಷಿಸುವಿರಾ ಎಂದು ಕೇಳಿದ ಬಿಗ್ ಬಿ, ತಮ್ಮ ಚಿತ್ರಗಳನ್ನು ಬಹಳ ಇಷ್ಟಪಟ್ಟು ನೋಡುವುದಾಗಿ ಹೇಳಿದ ಆಕೆಗೆ, “ಅರೇ, ನಿಮ್ಮ ಬಾಯಿಗೆ ತುಪ್ಪ ಸಕ್ಕರೆಯ ಲಾಡು ಪೇಡಾ ಹಾಕಬೇಕು” ಎಂದಿದ್ದಾರೆ.
ಅಶ್ವತ್ಥ ಮರದ ಕೆಳಗೆ ಈ ದೀಪ ಹಚ್ಚಿ ಚಮತ್ಕಾರ ನೋಡಿ
ಸೊಸೆ ಐಶ್ವರ್ಯಾ ರೈ ಮೇಲೆ ತಮಗೆ ಹೊಟ್ಟೆಕಿಚ್ಚು ಎಂದ ದಿವ್ಯಾ, ಮಾಜಿ ವಿಶ್ವ ಸುಂದರಿಯನ್ನು ಎಲ್ಲರಿಗಿಂತ ಚಂದವಾದ ಲಲನೆ ಎಂದು ತಾವು ಪರಿಗಣಿಸುವುದಾಗಿ ತಿಳಿಸಿದ್ದಾರೆ.
“ಆದರೆ ಬಾಕಿ ಹೀರೋಯಿನ್‌ಗಳಿಗಿಂತ ನಾನೇ ಚೆನ್ನಾಗಿ ಕಾಣುತ್ತೇನೆ. ನಾನೇಕೆ ಹೀರೋಯಿನ್ ಆಗಬಾರದು?” ಎಂದು ದಿವ್ಯಾ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅಮಿತಾಬ್, “ಯಾರಿಗೆ ಗೊತ್ತು, ಇಂದಿನಿಂದ ಆಚೆಗೆ ಆ ರೀತಿ ಆದರೂ ಆಗಬಹುದು,” ಎಂದಿದ್ದಾರೆ.
‘ಆರ್ಯನ್ ಖಾನ್ ತಪ್ಪಾದ ಸಮಯದಲ್ಲಿ, ತಪ್ಪಾದ ಜಾಗದಲ್ಲಿದ್ದ’ ಶಾರೂಕ್ ಪುತ್ರನ ಪರ ದನಿಯೆತ್ತಿದ ಸುಸೇನ್ ಖಾನ್
ಇದಕ್ಕೆ ಭಾರೀ ಖುಷಿಯಾದ ದಿವ್ಯಾ, “ನಿಮ್ಮ ಬಾಯಿಗೆ ತುಪ್ಪ ಸಕ್ಕರೆಯ ಪೇಡಾ ಬೀಳಲಿ” ಎಂದಿದ್ದಾರೆ.