alex Certify KBC ಯಲ್ಲಿ ಏಳು ಕೋಟಿ ರೂ. ಗೆದ್ರಾ ಸ್ಪರ್ಧಿ ? ಕುತೂಹಲ ಮೂಡಿಸಿದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KBC ಯಲ್ಲಿ ಏಳು ಕೋಟಿ ರೂ. ಗೆದ್ರಾ ಸ್ಪರ್ಧಿ ? ಕುತೂಹಲ ಮೂಡಿಸಿದ ವಿಡಿಯೋ

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ʼಕೌನ್​​ ಬನೇಗಾ ಕರೋಡ್​ ಪತಿʼ ಸೀಸನ್​ 15ರ ಹೊಸ ಪ್ರೋಮೋಗಳನ್ನ ರಿಲೀಸ್​ ಮಾಡಿದೆ. ಇದರಲ್ಲಿ ಕಾರ್ಯಕ್ರಮದ ನಿರೂಪಕ ಅಮಿತಾಭ್​ ಬಚ್ಛನ್​​ ತಮ್ಮ ಸ್ವಂತ ಡಿಸೈನರ್​ ಜಾಕೆಟ್​ನ್ನು ಅಭಿಮಾನಿಯೊಬ್ಬರಿಗೆ ಉಡುಗೊರೆಯಾಗಿ ನೀಡುತ್ತಿರೋದು ಕಂಡು ಬಂದಿದೆ.

ಇನ್ನೊಂದು ಪ್ರೋಮೋದಲ್ಲಿ ಅಮಿತಾಬ್​ರಿಂದ ಜಾಕೆಟ್​ ಪಡೆದ ಸ್ಪರ್ಧಿಯೇ 7 ಕೋಟಿ ರೂಪಾಯಿ ಮೌಲ್ಯದ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನಿಸುತ್ತಿರೋದನ್ನ ಕಾಣಬಹುದಾಗಿದೆ. ಗೇಮ್​ ಶೋ ತುಂಬಾನೇ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿರುವಂತೆ ಕಾಣುತ್ತಿದ್ದು ಸ್ಪರ್ಧಿಯು ಬಚ್ಛನ್​ರ ಕಾಲಿಗೆರಗಿ ಅಳುತ್ತಿರೋದು ಸಹ ಪ್ರೋಮೋದಲ್ಲಿದೆ.

ಅಳುತ್ತಿದ್ದ ಸ್ಪರ್ಧಿಯ ಬಳಿಗೆ ಅಮಿತಾಭ್​ ತೆರಳಿದ್ದಾರೆ. ಹಾಗೂ ಅವರಿಗೆ ಬೂದು ಬಣ್ಣದ ಜಾಕೆಟ್​ನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಳುತ್ತಲೇ ಇದ್ದ ಸ್ಪರ್ಧಿಗೆ ಹಿರಿಯ ನಟ ಬೆನ್ನು ತಟ್ಟಿದ್ದಾರೆ. ಅಮಿತಾಬ್ ಬಚ್ಛನ್​ ಎಷ್ಟೇ ತಡೆಯಲು ಯತ್ನಿಸಿದ್ರೂ ಸಹ ಸ್ಪರ್ಧಿ ಅವರ ಆಶೀರ್ವಾದ ಪಡೆದಿದ್ದಾರೆ.

ಸುಮ್ಮನೇ ಭಾವನೆಗಳಲ್ಲಿ ಮುಳುಗಿ ಹೋಗಬೇಡಿ. ಎಲ್ಲದಕ್ಕು ಒಂದು ಕಾರಣ ಇರುತ್ತೆ. ನಾನು ನಿಮಗೆ ಹೇಳುತ್ತೇನೆ ಎಂದು ಅಮಿತಾಬ್​ ಬಚ್ಛನ್​ ಮಾತನಾಡುತ್ತಿರುವುದೂ ಸಹ ಪ್ರೋಮೋದಲ್ಲಿ ಹಾಕಲಾಗಿದೆ. ಈ ಪ್ರೋಮೋ ನೋಡಿದ ಸಾಕಷ್ಟು ನೆಟ್ಟಿಗರು ಕಮೆಂಟ್​ನಲ್ಲಿ ನಿಜಕ್ಕೂ ಇದೊಂದು ಎಮೋಷನಲ್​​ ಎಪಿಸೋಡ್​ ಅಂತಾ ಅಭಿಪ್ರಾಯ ಹೊರಹಾಕ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...