ಕಝಾಕಿಸ್ತಾನ್ ಮಹಿಳೆಯು ಸಂಗೀತ ಪ್ರದರ್ಶನ ನೀಡುವ ವಿಡಿಯೋ ವಿಶೇಷ ಕಾರಣಕ್ಕೆ ವೈರಲ್ ಆಗಿದೆ. ಆ ವಿಡಿಯೊವನ್ನು ನಾರ್ವೇಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದುವರೆಗೆ 2 ಮಿಲಿಯನ್ ಬಾರಿ ವೀಕ್ಷಣೆ ಕಂಡಿದೆ.
ಕಝಾಕಿಸ್ತಾನ್‌ನ ರೋಸ್ ಕಲರ್ ಸರೋವರದ ಬ್ಯಾಕ್ ಗ್ರೌಂಡ್‌ನಲ್ಲಿ ಕುಳಿತ ಮಹಿಳೆ ಸಂಗೀತ ವಾದ್ಯವನ್ನು ನುಡಿಸುವ ವಿಡಿಯೊವನ್ನು ವೀಕ್ಷಿಸಿದ ನಂತರ ಜಾಲತಾಣ ದಂಗುಬಡಿದಿದೆ.
23 ವರ್ಷ ವಯಸ್ಸಿನ ಕಲಾವಿದೆಯು ಸುಂದರವಾದ ನೀಲಿ ಛಾಯೆಯ ಟ್ಯೂಲ್- ಟೈಯರ್ಡ್ ಸ್ಕರ್ಟ್ ನೊಂದಿಗೆ ಅಲಂಕರಿಸಲ್ಪಟ್ಟಿದ್ದು ಸಾಂಪ್ರದಾಯಿಕವಾಗಿ ಕಝಕ್ ವಧುಗಳು ಧರಿಸುವ ಶಿರಸ್ತ್ರಾಣ ತೊಟ್ಟಿದ್ದರು.
ಆ ಯುವತಿಯು ಕೊಬೈಟುಜ್ ಸರೋವರದ ಹಿನ್ನೆಲೆಯಲ್ಲಿ ಡೊಂಬ್ರಾ ಎಂಬ ಕಝಕ್ ಸಂಗೀತದ ತಂತಿ ವಾದ್ಯದಲ್ಲಿ ಭಾವಪೂರ್ಣ ರಾಗ ನುಡಿಸುತ್ತಿರುವುದು ಕಂಡುಬಂದಿದೆ.
ಅಕ್ಮೋಲಾ ಪ್ರದೇಶದ ಎರೆಮೆಂಟೌ ಜಿಲ್ಲೆಯ ಭೂಪ್ರದೇಶದಲ್ಲಿ ನೆಲೆಗೊಂಡಿರುವ ಕೊಬೈಟುಜ್ ಸರೋವರವು ಕೆಲವು ವರ್ಷಗಳಿಗೊಮ್ಮೆ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇದು ಡುನಾಲಿಯೆಲ್ಲಾ ಸಲೀನಾ ಎಂಬ ಪಾಚಿಯಿಂದಾಗಿ ಈ ರೀತಿ ಆಗುತ್ತದೆ ಎಂದು ನಂಬಲಾಗಿದೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.