
ಮದುವೆ ಫೋಟೋಶೂಟ್‌ಗಳೆಂದರೆ ಹಾಗೇ ನೊಡಿ. ಚಿತ್ರ ವಿಚಿತ್ರವಾಗಿ ಕಾಂಪೋಸ್ ಮಾಡಲಾಗುವ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಯಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ.
ಕಜಕಸ್ತಾನದ ಜೋಡಿಯೊಂದು ಹೊರಾಂಗಣ ಫೋಟೋಶೂಟಿಂಗ್ ಮಾಡಲು ತೆರಳಿದಾಗ ಫಜೀತಿ ಮಾಡಿಕೊಂಡಿದ್ದಾರೆ. ಮುರಾಟ್ ಜ಼ುರಾಯೆವ್ ಮತ್ತು ಆತನ ಮನದನ್ನೆ ಕಾಮಿಲ್ಲಾ ಮದುವೆ ಧಿರಿಸಿನಲ್ಲಿ ಮಿಂಚಿ ಫೋಟೋ ತೆಗೆಸಿಕೊಳ್ಳುವ ಸಿರಿಯಲ್ಲಿದ್ದಾಗಲೇ ಹೀಗೊಂದು ಎಡವಟ್ಟಾಗಿದೆ.
ಮಹಿಳೆಯರ ಮದುವೆ ವಯಸ್ಸಿನ ಕಾಯ್ದೆ ವಿರೋಧಿಸುವವರು ಅವರ ಶಿಕ್ಷಣ ಮೊಟಕುಗೊಳಿಸುವವರು – ಪ್ರಧಾನಿ ಮೋದಿ ಹೇಳಿಕೆ
ಪರ್ವತಗಳ ಹಿನ್ನೆಲೆಯಲ್ಲಿ ಸುಂದರವಾದ ಚಿತ್ರವೊಂದನ್ನು ತೆಗೆದುಕೊಳ್ಳಲು ಮುಂದಾದ ಜೋಡಿ ಅಕಸ್ಮಾತ್ ಆಗಿ ಮುಂದೆ ಇದ್ದ ಕೆಸರಿನ ಗುಂಡಿಯಲ್ಲಿ ಬಿದ್ದುಬಿಟ್ಟಿದೆ.
ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತನ್ನು ಸ್ವಲ್ಪ ಬೇರೆ ರೀತಿಯಲ್ಲಿ ಅರ್ಥೈಸುವಂತೆ ತಲೆ ಓಡಿಸಿದ ಛಾಯಾಗ್ರಾಹಕರು ನವಜೋಡಿ ಮಣ್ಣಿಗೆ ಬಿದ್ದ ಕ್ಷಣಗಳನ್ನೂ ರೊಮ್ಯಾಂಟಿಕ್ ಆಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಲು ಸಫಲವಾಗಿದ್ದಾರೆ.
ಕ್ಯಾಮರಾಮನ್‌ನ ಟೈಮಿಂಗ್‌ನಿಂದ ಈ ಫೋಟೋಗಳ ಸರಣಿಗೆ ನೆಟ್ಟಿಗರಿಂದ ಪಾಸಿಟಿವ್ ಕಾಮೆಂಟ್‌ಗಳು ಬಂದಿವೆ.

