ತನ್ನ ಜ಼ಡ್-ಸೀರೀಸ್ ಬೈಕುಗಳ 50ನೇ ವರ್ಷಾಚರಣೆ ಪ್ರಯುಕ್ತ ಕವಾಸಾಕಿ ಸರಣಿಯ ವಿಶೇಷ ಎಡಿಷನ್ ಬೈಕುಗಳನ್ನು ಬಿಡುಗಡೆ ಆಡಿದೆ.
1972ರಲ್ಲಿ ಕಾವಾಸಾಕಿ ಜ಼ಡ್1 ಬೈಕ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದಾಗಿ 50 ವರ್ಷಗಳಾದ ಪ್ರಯುಕ್ತ ಈ ವಿಶೇಷ ಬೈಕ್‌ಗಳ ಮೇಲೆ ಜ಼ಡ್650, ಜ಼ಡ್900, ಜ಼ಡ್650 ಆರ್‌ಎಸ್ ಮತ್ತು ಜ಼ಡ್900 ಆರ್‌ಎಸ್‌ಗಳ ವರ್ಣಗಳನ್ನು ಒಂದೇ ಫ್ರೇಂನಲ್ಲಿ ತಂದಿದೆ.
ಸೈನಾ ವಿರುದ್ಧ ಅವಹೇಳನಕಾರಿ ಕಮೆಂಟ್…! ಮೋದಿ ಪರ ಟ್ವೀಟ್ ಮಾಡಿದ್ದಕ್ಕೆ ಮುಗಿಬಿದ್ರಾ ನಟ ಸಿದ್ಧಾರ್ಥ್…? ಇಲ್ಲಿದೆ ಡಿಟೇಲ್ಸ್
ಮೋಟರ್ ಸೈಕಲ್‌ಗಳ 50ನೇ ವರ್ಷಾಚರಣೆ ಪ್ರಯುಕ್ತ, ಈ ಬೈಕುಗಳ ಬಾಡಿ, ಚಕ್ರಗಳನ್ನು ಕೆಂಪು ಬಣ್ಣದ ಹಿನ್ನೆಲೆಯಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಅಷ್ಟುದ್ದಕ್ಕೂ ಬಳಿಯಲಾಗಿದೆ. ಟ್ಯಾಂಕಿನ ಮೇಲೆ ಜ಼ಡ್ ಲೋಗೋ ಮತ್ತು 50ನೇ ವಾರ್ಷಿಕೋತ್ಸವದ ವಿಶೇಷ ಬ್ಯಾಡ್ಜ್ ಅನ್ನು ಹಾಕಲಾಗಿದೆ.
ಜ಼ಡ್650 ಮತ್ತು ಜ಼ಡ್650 ಆರ್‌ಎಸ್ ಬೈಕುಗಳಿಗೆ 649ಸಿಸಿ, ಲಿಕ್ವಿಡ್-ಕೂಲ್ಡ್ ಮತ್ತು 4-ಸ್ಟ್ರೋಕ್ ಅವಳಿ ಇಂಜಿನ್ ಹೊಂದಿದ್ದು, ಈ ಮೂಲಕ 64ಎನ್‌ಎಂ ಟಾರ್ಕ್ ಅನ್ನು 6700 ಆರ್‌ಪಿಎಂ ಮತ್ತು 68 ಪಿಎಸ್ ಶಕ್ತಿಯನ್ನು 8000 ಆರ್‌ಪಿಎಂನಲ್ಲಿ ಉತ್ಪಾದಿಸುತ್ತದೆ.
ಜ಼ಡ್900 ಮತ್ತು ಜ಼ಡ್900 ಆರ್‌ಎಸ್ ಬೈಕುಗಳಿಗೆ 948 ಸಿಸಿ, ಲಿಕ್ವಿಡ್-ಕೂಲ್ಡ್ ಮತ್ತು 4-ಸ್ಟ್ರೋಕ್ ಇನ್ಲೈನ್ ನಾಲ್ಕು ಇಂಜಿನ್ ಹೊಂದಿದ್ದು ಭಿನ್ನವಾದ ಪ್ರದರ್ಶನ ಕೊಡುತ್ತದೆ. 123 ಬಿಎಚ್‌ಪಿ ಮತ್ತು 98 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲದು ಜ಼ಡ್900. ರೆಟ್ರೋ ಲುಕ್‌ನ ಜ಼ಡ್900 ಆರ್‌ಎಸ್ 109 ಬಿಎಚ್‌ಪಿ ಮತ್ತು 98ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲದು.
50ನೇ ವರ್ಷಾಚರಣೆಯ ಈ ವಿಶೇಷ ಆವೃತ್ತಿಯ ಬೈಕುಗಳಲ್ಲಿ ಕೆಲವನ್ನು ಕವಾಸಾಕಿ ಭಾರತದಲ್ಲೂ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಈ ವಿಚಾರವಾಗಿ ಕವಾಸಾಕಿ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.