![](https://kannadadunia.com/wp-content/uploads/2025/02/kaveri.jpg)
ಬೆಂಗಳೂರು: ಸೈಬರ್ ವಂಚಕರು ಬೆಂಗಳೂರಿನಲ್ಲಿ ಕಾವೇರಿ 2.0 ಸಾಫ್ಟ್ ವೇರ್ ಹ್ಯಾಕ್ ಮಾಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕಾವೇರಿ 2.0 ಸಾಫ್ಟ್ ವೇರ್ ಆಸ್ತಿ ಖರೀದಿ, ಮಾರಾಟ, ನೋಂದಣಿಗೆ ಬಳಸುವ ತಂತ್ರಾಂಶವಾಗಿದ್ದು, ಹ್ಯಾಕರ್ಸ್, ಈ ಸಾಫ್ಟ್ ವೇರ್ ನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಾಫ್ಟ್ ವೇರ್ ಹ್ಯಾಕ್ ಆಗಿರುವ ಬಗ್ಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ದಯಾನಂದ್, ಕೇಂದ್ರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.