ಕೌನ್ ಬನೇಗಾ ಕ್ರೋರ್ಪತಿಯ 13ನೇ ಆವೃತ್ತಿಯನ್ನು ನಡೆಸಿಕೊಡುತ್ತಿರುವ ಅಮಿತಾಬ್ ಬಚ್ಚನ್ ಸಾಕಷ್ಟು ಸ್ಪರ್ಧಿಗಳನ್ನು ಹಾಟ್ ಸೀಟ್ನಲ್ಲಿ ನೋಡಿದ್ದಾರೆ. ಆದರೆ ಜನ್ಮಾಷ್ಟಮಿ ದಿನದಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಹಾಟ್ ಸೀಟ್ನಲ್ಲಿ ಕುಳಿತಿದ್ದ ಸ್ಪರ್ಧಿಯ ಧೈರ್ಯ ಹಾಗೂ ದೃಢ ನಿರ್ಧಾರಗಳನ್ನು ಕಂಡು ಬಿಗ್ ಬಿ ಫಿದಾ ಆಗಿದ್ದಾರೆ.
ಕೌನ್ ಬನೇಗಾ ಕರೋಡ್ಪತಿಯಲ್ಲಿ ಇದೇ ಮೊದಲ ಬಾರಿಗೆ ಅಂಧ ಸ್ಪರ್ಧಿ ಹಿಮಾನಿ ಬುಂದಲೇ ಹಾಟ್ ಸೀಟ್ನಲ್ಲಿ ಸ್ಥಾನ ಪಡೆದ್ರು. ಆಟದ ಉದ್ದಕ್ಕೂ ಹಿಮಾನಿಯ ಧೈರ್ಯ ಹಾಗೂ ದೃಢಸಂಕಲ್ಪಗಳನ್ನು ಕಂಡ ಅಮಿತಾಬ್ ಬಚ್ಚನ್ ನೀವು ನಿಜವಾದ ಸ್ಪೂರ್ತಿ ಎಂದು ಹೇಳಿದ್ದಾರೆ.
25 ವರ್ಷದ ಹಿಮಾನಿ ಉತ್ತರ ಪ್ರದೇಶದ ಆಗ್ರಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹುಮಾನವಾಗಿ ಬಂದ ಮೊತ್ತವನ್ನು ಅಂಧ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಳಸೋದಾಗಿ ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ರು. ಕಾರ್ಯಕ್ರಮದ ವೇಳೆ ಆಕೆಯ ನೆಚ್ಚಿನ ಗಾಯಕ ಜುಬಿನ್ ನೌತಿಯಾಲ್ ಜೊತೆ ಫೋನ್ ಸಂಭಾಷಣೆ ನಡೆಸಲು ಅವಕಾಶ ನೀಡುವ ಮೂಲಕ ಹಿಮಾನಿಯನ್ನು ಖುಷಿ ಪಡಿಸಿದ್ರು. ಕಾರ್ಯಕ್ರಮದಲ್ಲಿ ಹಿಮಾನಿ 50 ಲಕ್ಷ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.