ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಸದ್ಯ ಬಾಲಿವುಡ್ ನ ಮೋಸ್ಟ್ ಫೇವರಿಟ್ ಜೋಡಿಯಾಗಿದ್ದಾರೆ. ಅಭಿಮಾನಿಗಳಿಗಂತು ಈ ಜೋಡಿ ಸಖತ್ ಇಷ್ಟವಾಗಿದೆ.
ಇವರಿಬ್ಬರ ಪ್ರೀತಿಯ ರೂಮರ್ಸ್ ಕೇಳಿಯೆ ಖುಷಿಪಟ್ಟಿದ್ದ ಅಭಿಮಾನಿಗಳು, ಇವರ ಮದುವೆಯಾದ ಮೇಲಂತು ಇನ್ನಷ್ಟು ಖುಷಿಯಾಗಿದ್ರು. ವಿಕ್ಕಿ ಹಾಗೂ ಕತ್ರಿನಾ ಮದುವೆಯಾಗಿ ಇಂದಿಗೆ ಒಂದು ತಿಂಗಳಾಗಿದೆ.
ಈ ವಿಶೇಷ ದಿನವನ್ನ ಕತ್ರಿನಾ ಮತ್ತಷ್ಟು ವಿಶೇಷವಾಗಿಸಿದ್ದಾರೆ. ತನ್ನ ಗಂಡ ವಿಕ್ಕಿಯೊಂದಿಗಿನ ಕ್ಯೂಟ್ ಸೆಲ್ಫಿಯೊಂದನ್ನ ಪೋಸ್ಟ್ ಮಾಡಿರುವ ನಟಿ, ಒಂದು ತಿಂಗಳ ಶುಭಾಶಯ ಎಂದು ಪತಿಗೆ ವಿಷ್ ಮಾಡಿದ್ದಾರೆ.
ಕತ್ರಿನಾಳ ಈ ಪೋಸ್ಟ್ ಆಕೆಯ ಪತಿ ವಿಕ್ಕಿ ಕೌಶಲ್ ಸಹ ಕಾಮೆಂಟ್ ಮಾಡಿದ್ದು ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಕರೀನಾಕಪೂರ್, ರಣ್ವೀರ್ ಸಿಂಗ್, ಏಕ್ತಾ ಕಪೂರ್, ವಾಣಿಕಪೂರ್ ಸೇರಿದಂತೆ ಬಾಲಿವುಡ್ ನ ದಿಗ್ಗಜ ನಟ, ನಟಿಯರಿಂದ ಹಿಡಿದು ನಿರ್ದೇಶಕ ನಿರ್ಮಾಪಕರು ಈ ಜೋಡಿಗೆ, ಶುಭಾಶಯ ಹೇಳಿ, ಹಾರೈಸಿದ್ದಾರೆ.
ಪೋಸ್ಟ್ ಮಾಡಿದ ಕೆಲ ಗಂಟೆಗಳಲ್ಲಿ , ಈ ಪೋಸ್ಟ್ ಹತ್ತಿರತ್ತಿರ ಮೂರು ಮಿಲಿಯನ್ ಲೈಕ್ಸ್, 20 ಸಾವಿರ ಕಾಮೆಂಟ್ಸ್ ಗಳಿಸಿಕೊಂಡಿದೆ. 2021 ಡಿಸೆಂಬರ್ 9 ರಂದು ಕತ್ರಿನಾ ಹಾಗೂ ವಿಕ್ಕಿಕೌಶಲ್ ರಾಜಸ್ತಾನದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.