
ದಂಪತಿಗಳು ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ನಟಿ ಕತ್ರೀನಾ ಹಾಗೂ ನಟ ವಿಕ್ಕಿ ತಮ್ಮ ವಿವಾಹದ ಕೆಲವು ಸುಂದರ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಎಲ್ಲರ ಪ್ರೀತಿ, ಆಶೀರ್ವಾದ ತಮ್ಮ ಮೇಲಿರಲಿ ಎಂದು ಕೇಳಿಕೊಂಡಿದ್ದಾರೆ.
ಇನ್ನು ಕತ್ರೀನಾ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಉಡುಪುಗಳು ಹಾಗೂ ಆಭರಣಗಳನ್ನು ಸಬ್ಯಸಾಚಿ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಸಬ್ಯಸಾಚಿ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ವಧು ಕೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದ್ದರೆ, ವರ ದಂತವರ್ಣದ ಶೆರ್ವಾನಿ ಧರಿಸಿದ್ದರು. ವಧು ಕತ್ರೀನಾ ಧರಿಸಿರುವ ಲೆಹೆಂಗಾವನ್ನು ಮಟ್ಕಾ ಸಿಲ್ಕ್ನಲ್ಲಿ ಕೈಯಿಂದ ನೇಯಲಾಗಿದೆ. ಚಿನ್ನ ಮತ್ತು ಬೆಳ್ಳಿಯಿಂದ ಉಡುಪಿಗೆ ಡಿಸೈನ್ ಮಾಡಲಾಗಿದೆ. ಕತ್ರೀನಾ ಧರಿಸಿದ್ದ ವಜ್ರದಾಭರಣಗಳು 22ಕೆ ಚಿನ್ನದಿಂದ ತಯಾರಿಸಲಾಗಿದೆ.
ವರ ವಿಕ್ಕಿಯು, ಮರೋರಿ ಕಸೂತಿಯೊಂದಿಗೆ ದಂತ ಬಣ್ಣದ ರೇಷ್ಮೆ ಶೆರ್ವಾನಿ ಮತ್ತು ಐಕಾನಿಕ್ ಸಬ್ಯಸಾಚಿ ಕರಕುಶಲ ಚಿನ್ನದ ಲೇಪಿತ ಬೆಂಗಾಲ್ ಟೈಗರ್ ಬಟನ್ಗಳನ್ನು ಸಿಲ್ಕ್ ಶೆರ್ವಾನಿ ಧರಿಸಿದ್ದರು. ಅದರೊಂದಿಗೆ, ಅವರು ಝರಿ ಮರೋರಿ ಕಸೂತಿ ಪಲ್ಲು ಮತ್ತು ಬಾರ್ಡರ್ ಗಳೊಂದಿಗೆ ಟಸ್ಸಾರ್ ಜಾರ್ಜೆಟ್ ಶಾಲು ಧರಿಸಿದ್ದರು.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಈ ವಾರದ ಆರಂಭದಲ್ಲಿ ಮೆಹಂದಿ ಮತ್ತು ಸಂಗೀತ ಸಮಾರಂಭವನ್ನು ಆಯೋಜಿಸಿದ್ದರು. ಅವರು ಸೋಮವಾರ ತಮ್ಮ ಕುಟುಂಬದೊಂದಿಗೆ ರಾಜಸ್ಥಾನಕ್ಕೆ ಬಂದಿಳಿದಿದ್ದರು.

