ಹೊಸ ಬಟ್ಟೆ ಖರೀದಿ ಮಾಡದೆ, ಹೊಟೆಲ್ ನಲ್ಲಿ ಊಟ ಮಾಡದೆ ಇರೋಕೆ ನಮ್ಮಿಂದ ಸಾಧ್ಯವಿಲ್ಲ. ಹಣ ಉಳಿತಾಯ ಮಾಡಬೇಕೆನ್ನುವವರು ಕೂಡ ವಾರದಲ್ಲಿ ಒಂದು ದಿನ ಹೊಟೇಲ್ ಗೆ ಊಟಕ್ಕೆ ಹೋಗ್ತಾರೆ. ತಿಂಗಳಿಗೊಂದು ಬಟ್ಟೆ ಖರೀದಿ ಮಾಡ್ತಾರೆ. ಆದ್ರೆ ಇವೆಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟ ಮಹಿಳೆಯೊಬ್ಬಳು 35ನೇ ವಯಸ್ಸಿನಲ್ಲೇ 10 ಕೋಟಿ ರೂಪಾಯಿ ಉಳಿಸಿದ್ದಾಳೆ.
ಯಸ್, ದುಂದುವೆಚ್ಚ ನಿಲ್ಲಿಸಿ, 10 ಕೋಟಿ ರೂಪಾಯಿ ಉಳಿಸಿದ್ದೇನೆಂದು ಮಹಿಳೆ ಹೇಳಿಕೊಂಡಿದ್ದಾಳೆ. ಆಕೆ ಹೆಸರು ಕೇಟಿ ಡೊನೆಗನ್. ಹಿಂದಿನ ವರ್ಷ ಪತಿ ಎಲನ್ ಜೊತೆ ಅನೇಕ ದೇಶಗಳನ್ನು ಸುತ್ತಿ ಬಂದಿದ್ದಾಳೆ. ಕೇಟಿ ತಾಯಿ ಶಿಕ್ಷಕಿಯಂತೆ. ತಂದೆ ಮಾರುಕಟ್ಟೆ ಸಂಶೋಧಕರು. ಮಧ್ಯಮ ವರ್ಗದಿಂದ ಬಂದ ಕೇಟಿ, ದೊಡ್ಡ ಹೊಟೇಲ್ ನಲ್ಲಿ ತಿನ್ನುವಷ್ಟು ಹಣ ಹೊಂದಿರಲಿಲ್ಲ. ಪಾಕೆಟ್ ಮನಿಯನ್ನು ಖರ್ಚು ಮಾಡುವುದಕ್ಕಿಂತ ಉಳಿಸುವುದು ಆಕೆಗೆ ಖುಷಿ ನೀಡ್ತಿತ್ತಂತೆ.
ಯುಕೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ಸಂದರ್ಭದಲ್ಲಿ ಕೇಟಿ, ದುಂದುವೆಚ್ಚ ತಪ್ಪಿಸಿದ್ದಳಂತೆ. ಹೊಸ ಬಟ್ಟೆ ಖರೀದಿ ಮಾಡದ ಕೇಟಿ, ಸಣ್ಣ ಹೊಟೇಲ್ ಗಳಲ್ಲಿ ಆಹಾರ ಸೇವನೆ ಮಾಡ್ತಿದ್ದಳಂತೆ. 2008ರಲ್ಲಿ ಶಿಕ್ಷಣ ಮುಗಿಸಿ ತಾಯಿ ಮನೆಗೆ ಹೋದ ಆಕೆಗೆ ಮನೆ ಬಾಡಿಗೆ ಉಳಿದಿತ್ತು. 28,500 ಪೌಂಡ್ ಗೆ ಮೊದಲ ನೌಕರಿ ಶುರು ಮಾಡಿದ್ದಳು. ಪ್ಯಾಕೆಟ್ ಫುಡ್ ಸೇವನೆ ಮಾಡ್ತಿದ್ದ ಕೇಟಿ, ಹಳೆ ಗಾಡಿ ಓಡಿಸುತ್ತಿದ್ದಳು. ಹಾಗೆ ನೈಟ್ ಔಟ್ ಮಾಡುವ ಬದಲು ಮನೆಯಲ್ಲೇ ಪಾರ್ಟಿ ಮಾಡ್ತಿದ್ದಳು.
ಎರಡು ವರ್ಷದಲ್ಲಿ 42 ಸಾವಿರ ಪೌಂಡ್ ಉಳಿಸಿದ್ದಳಂತೆ. 167,650 ಪೌಂಡ್ ನ ಫ್ಲಾಟ್ ಖರೀದಿಗೆ ಹೆಸರು ನೋಂದಾಯಿಸಿದ್ದಳಂತೆ. 2013ರಲ್ಲಿ ಮದುವೆಯಾದಳಂತೆ. ಮದುವೆಗೂ ಕಡಿಮೆ ಖರ್ಚು ಮಾಡಿದ್ದಳಂತೆ. 2014ರವರೆಗೆ ಪ್ರತಿ ವರ್ಷ 58000 ಪೌಂಡ್ ಗಳಿಸಿದ್ಲು. ಪತಿ ಸಂಬಳ ಸೇರಿ ಅದು 63000 ಪೌಂಡ್ ಆಗಿತ್ತು. 2015ರಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಶುರು ಮಾಡಿದ್ದಳು. ಇದ್ರಿಂದ ಲಾಭ ಪಡೆದ ಕೇಟಿ, 2,91,000 ಪೌಂಡ್ ಉಳಿತಾಯ ಮಾಡಿದ್ದಳು. 2019ರ ವೇಳೆಗೆ ಮಿಲಿಯನ್ ಪೌಂಡ್ ಗಳಿಕೆ ಮಾಡಿದ ನಾನು 35ನೇ ವಯಸ್ಸಿನಲ್ಲಿಯೇ ನಿವೃತ್ತಿ ಪಡೆದೆ ಎಂದು ಆಕೆ ಹೇಳಿದ್ದಾಳೆ. ಆಕೆ ಪ್ರತಿ ವರ್ಷ ಹೂಡಿಕೆ ಮೇಲೆ 65 ಸಾವಿರ ಪೌಂಡ್ ಗಳಿಸುತ್ತಾಳಂತೆ. ಈಗ್ಲೂ ದುಂದು ವೆಚ್ಚ ಮಾಡದ ಅವರು, ಈ ಬಗ್ಗೆ ಜನರಿಗೆ ಸಲಹೆ ನೀಡ್ತಾರಂತೆ.