
ಬೆಂಗಳೂರು: ಆರ್.ಎಫ್.ಒ. ಶಿಲ್ಪಾ ಅಮಾನತು ಆದೇಶವನ್ನು ಕೆಎಟಿ ರದ್ದು ಮಾಡಿದೆ. ಹಾಸನ ಜಿಲ್ಲೆ ಸಕಲೇಶಪುರದ ಆರ್.ಎಫ್.ಒ. ಶಿಲ್ಪಾ ಅವರ ಅಮಾನತು ಆದೇಶವನ್ನು ಕೆ.ಎ.ಟಿ. ರದ್ದುಗೊಳಿಸಿದೆ.
ಡಿಎಫ್ಒ ವರದಿ ಆಧರಿಸಿ ಆರ್.ಎಫ್.ಒ. ಶಿಲ್ಪಾ ಅವರನ್ನು ಅಮಾನತು ಮಾಡಲಾಗಿತ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿಸಿಸಿಎಫ್ ರಾಜ್ ಕಿಶೋರ್ ಸಿಂಗ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಕರ್ತವ್ಯ ಲೋಪ ಆರೋಪದಡಿ ಶಿಲ್ಪಾ ಅವರನ್ನು ಅಮಾನತು ಮಾಡಲಾಗಿತ್ತು. ಅಮಾನತು ಪ್ರಶ್ನಿಸಿ ಶಿಲ್ಪಾ ಕೆಎಟಿ ಮೊರೆ ಹೋಗಿದ್ದರು. ಅಹವಾಲು ಪುರಸ್ಕರಿಸಿ ಕೆಎಟಿ ಅಮಾನತು ಆದೇಶ ರದ್ದುಗೊಳಿಸಿದೆ.