ಕಾಶ್ಮೀರ: ಅಳಿವಿನಂಚಿನಲ್ಲಿರುವ ಹಳೆಯ ಕುಂಬಾರಿಕೆ ಕಲೆಯ ಬಗ್ಗೆ ಕಾಶ್ಮೀರದ 32 ವರ್ಷದ ಸೈಮಾ ಶಫಿ ಎಂಬ ಮಹಿಳಾ ಇಂಜಿನಿಯರ್ ಅಲ್ಲಿನ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಮೂಲಕ ಪ್ರಾಚೀನ ಕಲೆಗೆ ಬೆಲೆ ಕೊಡುವ ಬಗ್ಗೆ ಮನವಿ ಮಾಡಿದ್ದಾರೆ.
ಕ್ರಲ್ ಕೂರ್ (ಕುಂಬಾರಿಕೆ ಮಾಡುವ ಕಾಶ್ಮೀರದ ಯುವತಿ) ಎಂದೇ ಪ್ರಸಿದ್ಧರಾಗಿರುವ ಸೈಮಾ ಅವರು ಇತ್ತೀಚೆಗೆ ಸರ್ಕಾರದ ಆಹ್ವಾನದ ಮೇರೆಗೆ ಮಧ್ಯ ಕಾಶ್ಮೀರದ ಭೇರ್ವಾ ಎಂಬಲ್ಲಿಗೆ ಭೇಟಿ ನೀಡಿ ಅಲ್ಲಿನ ಕುಂಬಾರಿಕೆ ಮಾಡುವ ಕುಶಲಕರ್ಮಿಗಳ ಜತೆ ಚರ್ಚಿಸಿದ್ದರು. ಅವರು ಸ್ವತಃ ಕುಂಬಾರಿಕೆ ಕರಕುಶಲಕರ್ಮಿ ಹಾಗೂ ಇಂಜಿನಿಯರ್ ಕೂಡ ಆಗಿದ್ದಾರೆ.
ಮಹಿಳೆ ಹೆಸರಲ್ಲಿ ಅಶ್ಲೀಲ ಮೆಸೇಜ್; ಆರೋಪಿ ಅರೆಸ್ಟ್
ಕರಕುಶಲಕರ್ಮಿಗಳ ಜತೆ ತಮ್ಮ ಅನುಭವ ಹಂಚಿಕೊಂಡಿರುವ ಸೈಮಾ, “ಮುಂದೊಂದು ದಿನ ಕಾಶ್ಮೀರಿ ಆಧುನಿಕ ಅಡುಗೆ ಮನೆಗಳಲ್ಲಿ ಮಣ್ಣಿನ ಮಡಿಕೆಗಳು, ಕಂಟೇನರ್ ಗಳು ಕಾಣಲಿವೆ. ಅವು ಬೇಸಿಗೆಯಲ್ಲಿ ನೀರನ್ನು ತಂಪಾಗಿ ಹಾಗೂ ಸಿಹಿಯಾಗಿ ಇಡಬಲ್ಲವು” ಎಂದು ಹೇಳಿಕೊಂಡಿದ್ದಾರೆ. ಈ ವಿಷಯ ಸರ್ಕಾರದ ಗಮನಕ್ಕೆ ಸಹ ಬಂದಿದ್ದು, ಕುಂಬಾರಿಕೆ ಕಲೆಗೆ ಪುನರುಜ್ಜೀವನ ನೀಡಲು ಯೋಜನೆ ರೂಪಿಸುತ್ತಿದೆ.