
ಬಾಲಕಿಯನ್ನು ಕೊಂದು, ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ಭಯಾನಕ ಘಟನೆ ಮಧ್ಯ ಕಾಶ್ಮೀರದ ಬುದ್ಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮೃತದೇಹವನ್ನು ತುಂಡರಿಸಿ ವಿವಿಧ ಸ್ಥಳಗಳಲ್ಲಿ ಹೂತುಹಾಕಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿ ಯನ್ನು ಬಂಧಿಸಲಾಯಿತು.
ಮಾರ್ಚ್ 7 ರಂದು ಕೋಚಿಂಗ್‌ಗೆ ತೆರಳಿದ್ದ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರ ಬೆನ್ನಟ್ಟಿ ಹೋದ ಬಳಿಕ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿ ಮೊಹಂದಪೋರಾ ಬುದ್ಗಾವ್ ನಿವಾಸಿ ಶಬೀರ್ ಅಹ್ಮದ್ ವಾನಿ ಈ ಘೋರ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತನ್ನ ಅಪರಾಧವನ್ನು ಮರೆಮಾಚಲು, ಅವನು ಬಾಲಕಿಯನ್ನು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಹೂತುಹಾಕಿದ್ದನ್ನು ತಿಳಿಸಿದ್ದಾನೆ. ದೇಹದ ಎಲ್ಲಾ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.