ಕಾಶಿ ವಿಶ್ವನಾಥ ಧಾಮ ಹೇಗೆ ಅಲಂಕೃತಗೊಂಡಿತ್ತು ಗೊತ್ತಾ..? ಇಲ್ಲಿವೆ ಸುಂದರ ಫೋಟೋ 14-12-2021 7:49AM IST / No Comments / Posted In: Latest News, India, Live News ಉತ್ತರ ಪ್ರದೇಶದ ವಾರಣಾಸಿಯ ದಶಾಶ್ವಮೇಧ ಘಾಟ್ ಬಳಿಯ ಕಾಶಿ ವಿಶ್ವನಾಥ ದೇವಾಲಯದ ಸುತ್ತಲಿನ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 13ರ ಸೋಮವಾರದಂದು ಉದ್ಘಾಟಿಸಿದ್ದಾರೆ. ಕಾಲಭೈರವೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಮೋದಿ ಉದ್ಘಾಟಿಸಿದ್ದಾರೆ. ಐತಿಹಾಸಿಕ ಕಾಶಿ ವಿಶ್ವನಾಥ ದೇವಸ್ಥಾನವನ್ನು ಗಂಗಾ ನದಿಯ ದಡಕ್ಕೆ ಸಂಪರ್ಕಿಸಲು ಸುಲಭವಾಗಿ ಪ್ರವೇಶಿಸಬಹುದಾದ ಮಾರ್ಗವನ್ನು ರಚಿಸಲು ಈ ಯೋಜನೆಯನ್ನು ಕಲ್ಪಿಸಲಾಗಿದೆ. 1ನೇ ಹಂತವನ್ನು 339 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಮೂಲಸೌಕರ್ಯಗಳ ಉದ್ಘಾಟನೆಯು, ವಾರಣಾಸಿ ನಗರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಇನ್ನು ಭವ್ಯ ಉದ್ಘಾಟನೆಗೂ ಮುನ್ನ ಕಾಶಿ ವಿಶ್ವನಾಥ ಧಾಮ ಬಹಳ ಸುಂದರವಾಗಿ ಸಜ್ಜುಗೊಂಡಿತ್ತು. ಉದ್ಘಾಟನೆಗೆ ಮುನ್ನ ಕಾಶಿ ವಿಶ್ವನಾಥ ಧಾಮ ದೇವಾಲಯದ ಸಂಕೀರ್ಣವನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಶಿ ವಿಶ್ವನಾಥ ಧಾಮ ಹೇಗೆ ಸಜ್ಜುಗೊಂಡಿತ್ತು ಎಂಬುದರ ಕೆಲವು ಸುಂದರವಾದ ಫೋಟೋಗಳು ಇಲ್ಲಿವೆ.