ಬೆಂಗಳೂರು: ಆಗಸ್ಟ್ 27ರಂದು ರಾಜ್ಯಾದ್ಯಂತ 384 ಕೆಎಎಸ್ ಹುದ್ದೆಗಳ ನೇಮಕಾತಿಗೆ ಪೂರ್ವಬಾವಿ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ಕರ್ನಾಟಕ ಲೋಕಸೇವಾ ಆಯೋಗ(KPSC) ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪಾಲಿಸಬೇಕಾದ ವಸ್ತ್ರ ಸಂಹಿತೆ ಸೇರಿದಂತೆ ಪಾಲಿಸಬೇಕಾದ ಸೂಚನೆಗಳ ವಿವರಗಳನ್ನು ಲೋಕಸೇವಾ ಆಯೋಗ ಪ್ರಕಟಿಸಿದೆ.
ಎಲ್ಲಾ ಅಭ್ಯರ್ಥಿಗಳು ಆಯೋಗದ ವೆಬ್ಸೈಟ್ ನಿಂದ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತುಂಬು ತೋಳಿನ ಶರ್ಟ್, ಟಿ ಶರ್ಟ್, ಫ್ರಿಲ್ಸ್, ಪದರಗಳುಳ್ಳ, ವಿವಿಧ ರೀತಿಯ ವಿನ್ಯಾಸವುಳ್ಳ ವಸ್ತ್ರ ಧರಿಸುವುದನ್ನು ನಿಷೇಧಿಸಲಾಗಿದೆ. ಸರಳ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಯಾವುದೇ ರೀತಿಯ ಆಭರಣ ಧರಿಸುವಂತಿಲ್ಲ. ಶೂ ಮತ್ತು ಸಾಕ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ. ಆಯೋಗದ ವೆಬ್ಸೈಟ್ನಲ್ಲಿ ಸೂಚನೆಗಳನ್ನು ಗಮನಿಸಬಹುದಾಗಿದೆ.