alex Certify ದೋಷಪೂರಿತ ಪ್ರಶ್ನೆ ಪತ್ರಿಕೆ ನೀಡಿದ ಹಿನ್ನೆಲೆ ಕೆಎಎಸ್ ಪರೀಕ್ಷೆ ಕಟ್ ಆಫ್ ಅಂಕ 150 -160ಕ್ಕೆ ಇಳಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೋಷಪೂರಿತ ಪ್ರಶ್ನೆ ಪತ್ರಿಕೆ ನೀಡಿದ ಹಿನ್ನೆಲೆ ಕೆಎಎಸ್ ಪರೀಕ್ಷೆ ಕಟ್ ಆಫ್ ಅಂಕ 150 -160ಕ್ಕೆ ಇಳಿಕೆ ಸಾಧ್ಯತೆ

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿ ದೋಷಪೂರಿತ ಪ್ರಶ್ನೆ ಪತ್ರಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಮುಖ್ಯ ಪರೀಕ್ಷೆ ಅರ್ಹತೆ ಪಡೆಯಲು ಕಟ್ ಆಫ್ ಅಂಕಗಳನ್ನು 150 ರಿಂದ 160ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ.

ಬಿಡುಗಡೆಯಾದ ಕೀ ಉತ್ತರಗಳ ಆಧಾರದ ಮೇಲೆ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಅನೇಕ ತರಬೇತಿ ಕೇಂದ್ರಗಳು, ಬೋಧಕರು, ಉಪನ್ಯಾಸಕರು, ತಜ್ಞರು ವಿಶ್ಲೇಷಣೆ ನಡೆಸಿದ್ದು, ಕಟಾಫ್ ಅಂಕ 150 ರಿಂದ 160ಕ್ಕೆ ಇಳಿಕೆಯಾಗಬಹುದು ಎಂದು ಹೇಳಲಾಗಿದೆ.

ಹೀಗಾಗಿ 150 ರಿಂದ 160ರ ಆಸು ಪಾಸು ಅಂಕ ಗಳಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಉಳಿದಂತೆ ಬೇರೆ ವರ್ಗಗಳಿಗೆ ಕಟಾಫ್ ಅಂಕ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

ತಲಾ 200 ಅಂಕಗಳ ಎರಡು ಪತ್ರಿಕೆಗಳಿಗೆ ಒಟ್ಟು 400 ಅಂಕಗಳ ಪೂರ್ವಭಾವಿ ಪರೀಕ್ಷೆ ನಡೆಸಲಾಗಿದೆ. 2017- 18 ರ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳ ಕಟ್ ಆಫ್ ಅಂಕ 200 ಇದ್ದರೆ, 2015ರಲ್ಲಿ 184 ಇತ್ತು. ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಳದಿಂದ ಸ್ಪರ್ಧೆ ಹೆಚ್ಚಾಗುವ ಕಾರಣಕ್ಕೆ ಕಟ್ ಆಫ್ ಅಂಕ ಹೆಚ್ಚಾಗುವುದು ಸಹಜ. ಈ ಬಾರಿ ಕೆಪಿಎಸ್ಸಿ ಪ್ರಶ್ನೆ ಪತ್ರಿಕೆಗಳು ಲೋಪ ದೋಷಗಳಿಂದ ಕೂಡಿದ ಕಾರಣ ಇಳಿಮುಖವಾಗಿದೆ. ಭಾಷಾಂತರ, ವಾಸ್ತವಾಂಶಗಳಲ್ಲಿ ತಪ್ಪು ಆದ ಕಾರಣ ಅನೇಕ ಕೀ ಉತ್ತರಗಳಿಗೆ ಆಕ್ಷೇಪಣಿ ಸಲ್ಲಿಕೆ ಆಗುತ್ತಿದ್ದು, ಆಕ್ಷೇಪಣೆ ಪರಿಗಣಿಸಿದಲ್ಲಿ ಕೃಪಾಂಕ ದೊರೆಯುವ ಸಾಧ್ಯತೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...