ಉತ್ತರ ಭಾರತದ ಪ್ರಸಿದ್ದ ಹಬ್ಬಗಳಲ್ಲಿ ಕರ್ವಾ ಚೌತ್ ಒಂದು. ಮಹಿಳೆಯರು ಈ ದಿನ ಉಪವಾಸ ಮಾಡಿ ಗಂಡನ ಆಯಸ್ಸು ವೃದ್ಧಿಗೆ ಪ್ರಾರ್ಥನೆ ಮಾಡ್ತಾರೆ. ಹೆಣ್ಣು ಮಕ್ಕಳು ಒಳ್ಳೆ ಪತಿ ಸಿಗಲಿ ಎಂದು ಉಪವಾಸ ವ್ರತ ಮಾಡ್ತಾರೆ. ನವೆಂಬರ್ ಒಂದರಂದು ಈ ಬಾರಿ ಕರ್ವಾ ಚೌತ್ ಆಚರಣೆ ಮಾಡಲಾಗ್ತಿದೆ. ಕರ್ವಾ ಚೌತ್ ವ್ರತವನ್ನು ನೀವು ಮಾಡ್ತಿಲ್ಲವೆಂದ್ರೂ ತೊಂದ್ರೆ ಇಲ್ಲ, ಈ ಶುಭ ದಿನ ನೀವು ಕೆಲ ವಸ್ತುಗಳನ್ನು ನಿಮ್ಮ ಮನೆಗೆ ತೆಗೆದುಕೊಂಡು ಬನ್ನಿ.
ಪತಿ – ಪತ್ನಿ ಸಂಬಂಧವನ್ನು ಸುಧಾರಿಸುವ ಹಬ್ಬ ಇದು. ಈ ದಿನ ನೀವು ದಾಂಪತ್ಯ, ಸುಮಂಗಲಿಗೆ ಸಂಬಂಧಿಸಿದ ವಸ್ತುವನ್ನು ಮನೆಗೆ ತಂದ್ರೆ ಮನೆಯಲ್ಲಿ ಸದಾ ಸುಖ, ಸಂತೋಷ ನೆಲೆಸಿರುತ್ತದೆ.
ವಿವಾಹಿತ ಮಹಿಳೆಯರು ಕಾಲಿಗೆ ಕಾಲುಂಗುರ ಧರಿಸುತ್ತಾರೆ. ಕರ್ವಾ ಚೌತ್ ದಿನ ಕಾಲುಂಗರವನ್ನು ಖರೀದಿ ಮಾಡಬೇಕು. ಈ ದಿನ ಹೊಸ ಕಾಲುಂಗುರ ಧರಿಸೋದ್ರಿಂದ ಸೌಭಾಗ್ಯ ನಿಮ್ಮದಾಗುತ್ತದೆ.
ಮಣ್ಣಿನ ಬಳೆ ಕೂಡ ಸುಮಂಗಲಿಯ ವಸ್ತುವಾಗಿದೆ. ನೀವು ಕರ್ವಾ ಚೌತ್ ದಿನ ಮಣ್ಣಿನ ಬಳೆಯನ್ನು ಖರೀದಿ ಮಾಡಿ. ಹಸಿರು ಮತ್ತು ಕೆಂಪು ಬಣ್ಣದ ಬಳೆ ಹೆಚ್ಚು ಮಂಗಳಕರ.
ಹಿಂದೂ ಧರ್ಮದಲ್ಲಿ ನವಿಲುಗರಿಗೆ ಹೆಚ್ಚಿನ ಮಹತ್ವವಿದೆ. ಮನೆಯಲ್ಲಿ ನವಿಲುಗರಿ ಇಟ್ಟರೆ ಶುಭವೆಂದು ನಂಬಲಾಗುತ್ತದೆ. ಮಹಿಳೆಯರು ಕರ್ವಾ ಚೌತ್ ದಿನ ನವಿಲುಗರಿಯನ್ನು ಮನೆಗೆ ತರಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಕರ್ವಾ ಚೌತ್ ದಿನ ನೀವು ಅಪ್ಪಿತಪ್ಪಿಯೂ ಕೆಲ ವಸ್ತುಗಳನ್ನು ಖರೀದಿ ಮಾಡ್ಬೇಡಿ. ಅದ್ರಲ್ಲಿ ಆಯುಧ, ಚೂಪಾದ ವಸ್ತು, ಚಾಕು ಸೇರಿದೆ. ಇವುಗಳನ್ನು ಮನೆಗೆ ತರೋದ್ರಿಂದ ದಾಂಪತ್ಯ ಸಂಬಂಧ ಹಾಳಾಗುತ್ತದೆ. ಅದೇ ರೀತಿ ಈ ದಿನ ಮಹಿಳೆಯರು ಕಪ್ಪು ಹಾಗೂ ಬಿಳಿ ಬಣ್ಣದ ಬಟ್ಟೆಯನ್ನು ಖರೀದಿ ಮಾಡಬಾರದು.