alex Certify ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗ್ಬೇಕೆಂದ್ರೆ ಕರ್ವಾ ಚೌತ್ ದಿನ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗ್ಬೇಕೆಂದ್ರೆ ಕರ್ವಾ ಚೌತ್ ದಿನ ಹೀಗೆ ಮಾಡಿ

ಹಿಂದೂ ಧರ್ಮದಲ್ಲಿ ಕರ್ವಾ ಚೌತ್ ಉಪವಾಸವನ್ನು ಬಹಳ ಮುಖ್ಯವೆಂದು ನಂಬಲಾಗಿದೆ. ಪತಿಯ ಯಶಸ್ಸು ಹಾಗೂ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ದಿನ ಪತ್ನಿ ಉಪವಾಸ ಕೈಗೊಳ್ಳುತ್ತಾಳೆ. ಈ ಬಾರಿ ಅಕ್ಟೋಬರ್ 13ರಂದು ಕರ್ವಾಚೌತ್ ಆಚರಣೆ ಮಾಡಲಾಗ್ತಿದೆ. ದೀರ್ಘಕಾಲ ಒಟ್ಟಿಗೆ ಬಾಳ್ತೆನೆಂದು ಪ್ರಮಾಣ ಮಾಡಿ, ಸಪ್ತಪದಿ ತುಳಿದಿರುತ್ತಾರೆ. ಆದ್ರೆ ಸಣ್ಣ ವಿಷಯಗಳು ಅನೇಕ ಬಾರಿ ವೈವಾಹಿಕ ಜೀವನದಲ್ಲಿ ಸಮಸ್ಯೆ ತರುತ್ತವೆ. ಒಂದ್ವೇಳೆ ನಿಮ್ಮ ದಾಂಪತ್ಯದಲ್ಲೂ ಪ್ರೀತಿ ಕಡಿಮೆಯಾಗ್ತಿದೆ ಎಂದಾದ್ರೆ ಪತಿ ಪ್ರೀತಿ ದ್ವಿಗುಣಗೊಳ್ಳಲು ನೀವು ಕೆಲ ಉಪಾಯವನ್ನು ಮಾಡಿ. ಇದ್ರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಮನೆ ಮಾಡುತ್ತದೆ.

ವೈವಾಹಿಕ ಜೀವನದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಕಡಿಮೆ ಮಾಡಲು ಕರ್ವಾ ಚೌತ್ ದಿನದಂದು ಸಿಹಿ ವೀಳ್ಯದೆಲೆಗೆ ಸಂಬಂಧಿಸಿದ ಈ ಪರಿಹಾರವನ್ನು ಮಾಡಬಹುದು. ಪೂಜೆ ವೇಳೆ ಪಾರ್ವತಿ-ಶಿವನಿಗೆ ಸಿಹಿ ವೀಳ್ಯದೆಲೆಯನ್ನು ಅರ್ಪಿಸಬೇಕು. ಇದ್ರಿಂದ ನಿಮಗೆ ಲಾಭವಾಗುತ್ತದೆ.

ಪತಿ-ಪತ್ನಿ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಗ್ತಿದ್ದರೆ, ಮನೆಯ ವಾತಾವರಣ ಹದಗೆಡುತ್ತಿದ್ದರೆ ಗೋಮತಿ ಚಕ್ರದಿಂದ ನೀವು ಪರಿಹಾರ ಕಾಣಬಹುದು. ಕರ್ವಾ ಚೌತ್ ದಿನದಂದು 11 ಗೋಮತಿ ಚಕ್ರಗಳನ್ನು ಮತ್ತು ಕೆಂಪು ಬಣ್ಣದ ಸಿಂಧೂರವನ್ನು ಪೆಟ್ಟಿಗೆಯಲ್ಲಿ ಇಡಬೇಕು. ಈ ಪೆಟ್ಟಿಗೆಯನ್ನು ಯಾರಿಗೂ ಕಾಣದ ಜಾಗದಲ್ಲಿ ಇಡಬೇಕು. ಇದ್ರಿಂದ ದಂಪತಿ ಮಧ್ಯೆ ಗಲಾಟೆ ಕಡಿಮೆಯಾಗುತ್ತದೆ.

ಆರಂಭದಲ್ಲಿ ಸಣ್ಣ ಗಲಾಟೆ ಎನ್ನಿಸಿದ್ರೂ ನಂತ್ರದ ದಿನಗಳಲ್ಲಿ ಅದೇ ದೊಡ್ಡದಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಕರ್ವಾ ಚೌತ್ ದಿನದಂದು ದೇವರಿಗೆ ಕೆಲವು ಸಿಹಿ ಪದಾರ್ಥಗಳನ್ನು ಅರ್ಪಿಸಬೇಕು. ನಂತ್ರ ಅದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಬೇಕು. ಸಿಹಿ ಸೇವನೆ ಮೂಲಕ ಉಪವಾಸ ಮುಗಿಸಿದ್ರೆ ದಂಪತಿ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...