ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕರ್ವಾ ಚೌತ್ ಹಬ್ಬವನ್ನು ನಮ್ಮಲ್ಲಿಯೂ ಅನೇಕರು ಆಚರಿಸ್ತಾರೆ. ಕರ್ವಾ ಚೌತ್ ಗೆ ಇನ್ನು ಎರಡೇ ದಿನ ಬಾಕಿಯಿದೆ. ಅಕ್ಟೋಬರ್ 24ರಂದು ಈ ಭಾರಿ ಕರ್ವಾ ಚೌತ್ ಆಚರಿಸಲಾಗ್ತಿದೆ. ದಿನವಿಡಿ ಉಪವಾಸವಿದ್ದು, ಪತಿ ಆಯಸ್ಸು, ಆರೋಗ್ಯ ಬಯಸುವ ಪತ್ನಿಗೆ ಪತಿ ಉಡುಗೊರೆ ನೀಡುವ ಪದ್ಧತಿಯಿದೆ. ಈ ಬಾರಿ ಯಾವ ಉಡುಗೊರೆ ನೀಡಬೇಕೆಂದು ಆಲೋಚನೆ ಮಾಡ್ತಿರುವ ಪತಿಯಂದಿರಿಗೆ ಇಲ್ಲೊಂದಿಷ್ಟು ಟಿಪ್ಸ್ ಇದೆ.
ಆಭರಣ, ಸೀರೆ: ಡಿಸೈನರ್ ಸೀರೆ ಮತ್ತು ಆಭರಣವನ್ನು ಉಡುಗೊರೆಯಾಗಿ ನೀಡಬಹುದು. ಕರ್ವಾ ಚೌತ್ ಹಿನ್ನಲೆಯಲ್ಲಿ ಅನೇಕ ಕಡೆ ಆಫರ್ ನಲ್ಲಿ ಈ ವಸ್ತುಗಳು ಸಿಗ್ತವೆ.
ಮೇಕಪ್ ಕಿಟ್ : ಮಹಿಳೆಯರಿಗೆ ಮೇಕಪ್ ಕಿಟ್ ಇಷ್ಟವಾಗದೆ ಇರುವುದಿಲ್ಲ. ಕರ್ವಾ ಚೌತ್ ದಿನದಂದು ಪತ್ನಿಗೆ ಹೊಸ ಮೇಕಪ್ ಕಿಟ್ ನೀಡುವ ಮೂಲಕ ಹಬ್ಬವನ್ನು ಹೆಚ್ಚು ವಿಶೇಷಗೊಳಿಸಿ.
ಹ್ಯಾಂಡ್ ಬ್ಯಾಗ್ : ಹ್ಯಾಂಡ್ ಬ್ಯಾಗ್ ಈಗ ಫ್ಯಾಷನ್. ಇದು ಮಹಿಳೆಯರಿಗೆ ಅತ್ಯಗತ್ಯ. ಮಾರುಕಟ್ಟೆಯಲ್ಲಿ ಭಿನ್ನಭಿನ್ನ ಹ್ಯಾಂಡ್ ಬ್ಯಾಗ್ ಲಭ್ಯವಿದೆ. ಪತ್ನಿಗೆ ಮುದ್ದಾದ ಬ್ಯಾಗ್ ನೀಡಿ ಅಚ್ಚರಿಗೊಳಿಸಬಹುದು.
ವಾಚ್ : ಕರ್ವಾ ಚೌತ್ ದಿನ ಪತ್ನಿಗೆ ಸುಂದರ ವಾಚ್ ಉಡುಗೊರೆಯಾಗಿ ನೀಡಬಹುದು. ಪತ್ನಿ ಇದ್ರಿಂದ ಖುಷಿಯಾಗೋದ್ರಲ್ಲಿ ಎರಡು ಮಾತಿಲ್ಲ.