ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಹೆಚ್ಚಿನ ಮಹತ್ವವಿದೆ. ಈ ಮಾಸವನ್ನು ಪರ್ವ ಮಾಸ ಎಂದೂ ಕರೆಯುತ್ತಾರೆ. ವಿಷ್ಣುವಿಗೆ ವಿಶೇಷವಾದ ಈ ತಿಂಗಳಿನಲ್ಲಿ ಅನೇಕ ಹಬ್ಬಗಳು ಬರುತ್ತವೆ. ಕಾರ್ತಿಕ ಮಾಸ ಧಾರ್ಮಿಕ ವಿಷ್ಯಕ್ಕೆ ಮಾತ್ರವಲ್ಲ ಆರೋಗ್ಯದ ವಿಷ್ಯದಲ್ಲೂ ಹೆಚ್ಚು ಮಹತ್ವ ಪಡೆದಿದೆ.
ಚಳಿಗಾಲ ಶುರುವಾಗುವುದ್ರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಧರ್ಮ ಹಾಗೂ ಆರೋಗ್ಯ ಎರಡೂ ದೃಷ್ಟಿಯಿಂದ ಕಾರ್ತಿಕ ಮಾಸದಲ್ಲಿ ಕೆಲ ಆಹಾರ ಸೇವನೆ ಮಾಡಬಾರದು.
ಕಾರ್ತಿಕ ಮಾಸದಲ್ಲಿ ಮೊಸರು ಮತ್ತು ಮಜ್ಜಿಗೆ ಸೇವನೆ ಮಾಡಬಾರದು. ಈ ತಿಂಗಳಲ್ಲಿ ಮೊಸರು ತಿನ್ನುವುದನ್ನು ಧರ್ಮಗ್ರಂಥಗಳಲ್ಲಿ ನಿಷಿದ್ಧವೆಂದು ಪರಿಗಣಿಸಲಾಗಿದೆ. ಬಯಸಿದ್ರೆ ಹಾಲು ಮಾತ್ರ ಸೇವನೆ ಮಾಡಬಹುದು.
ಕಾರ್ತಿಕ ಮಾಸದಲ್ಲಿ ಮೀನಿನಿಂದ ದೂರವಿರಬೇಕು. ವಿಷ್ಣುವು ಮೀನಿನ ರೂಪದಲ್ಲಿ ನೀರಿನಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಹಾಗಾಗಿ ಮೀನು ಸೇವನೆ ನಿಷಿದ್ಧ.
ಕಾರ್ತಿಕ ಮಾಸದಲ್ಲಿ ಬದನೆ ಕಾಯಿ ತಿನ್ನುವುದನ್ನು ತಪ್ಪಿಸಬೇಕು, ಬದನೆಯನ್ನು ಧಾರ್ಮಿಕವಾಗಿ ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ತಿಂಗಳಲ್ಲಿ ಬದನೆಕಾಯಿಯನ್ನು ತಿನ್ನುವುದು ಪಿತ್ತ ದೋಷಕ್ಕೆ ಕಾರಣವಾಗುತ್ತದೆ.
ಕಾರ್ತಿಕ ಮಾಸದಲ್ಲಿ ಹಾಗಲಕಾಯಿಯನ್ನು ಸಹ ಸೇವನೆ ಮಾಡಬಾರದು. ಮಸಾಲೆಯುಕ್ತ ಆಹಾರವನ್ನೂ ತಿನ್ನಬಾರದು.