ಕಾಮಿಡಿ ಸೀರಿಸ್ ಚಿತ್ರಗಳಲ್ಲಿ ನಟಿಸಿದ್ದ ಅಕ್ಷಯ್ ಕುಮಾರ್ ಅವರು ಹೇರಾ ಫೇರಿ, ವೆಲ್ಕಮ್ ಮತ್ತು ಅವಾರಾ ಪಾಗಲ್ ದೀವಾನಾ ದಲ್ಲಿ ಮಿಂಚಿದ್ದರು. ಆದರೆ ಈ ‘ಖಿಲಾಡಿ’ ಸ್ಟಾರ್ ಈಗ ಸೀಕ್ವೆಲ್ಗಳಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
‘ಹೇರಾ ಫೇರಿ 3’ ನಲ್ಲಿ ಅಕ್ಷಯ್ ಬದಲಿಗೆ ಕಾರ್ತಿಕ್ ಆರ್ಯನ್ ರನ್ನು ಚಿತ್ರ ನಿರ್ಮಾಪಕರು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಜನಪ್ರಿಯ ಫ್ರಾಂಚೈಸಿಯ ಪ್ರಮುಖ ಭಾಗವಾಗಿರುವ ಪರೇಶ್ ರಾವಲ್ ಕೂಡ ಇದನ್ನು ಖಚಿತಪಡಿಸಿದ್ದಾರೆ.
ಟ್ವಿಟರ್ನಲ್ಲಿ ಅಭಿಮಾನಿಯೊಬ್ಬರು ಅಕ್ಷಯ್ ಕುಮಾರ್ ನನ್ನು ‘ಹೇರಾ ಫೆರಿ 3’ ಗಾಗಿ ಕಾರ್ತಿಕ್ ಬರಲಿದ್ದಾರೆ ಎಂಬ ಸುದ್ದಿ ನಿಜವೇ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪರೇಶ್ ರಾವಲ್, ‘ಹೌದು, ಇದು ನಿಜ’ ಎಂದರು. ಆದಾಗ್ಯೂ ಈ ಬಗ್ಗೆ ನಿರ್ಮಾಪಕರು ಮತ್ತು ನಟರಿಂದ ಅಧಿಕೃತ ಪ್ರಕಟಣೆ ಬಂದಿಲ್ಲ.
ಕಾರ್ತಿಕ್ ಕೊನೆಯದಾಗಿ ಅನೀಸ್ ಬಾಜ್ಮೀ ಅವರ ‘ಭೂಲ್ ಭುಲೈಯಾ 2’ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ಹೆಜ್ಜೆ ಹಾಕಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಆಗಿತ್ತು. ಚಿತ್ರದಲ್ಲಿನ ಅವರ ಪಾತ್ರ ‘ರೂಹ್ ಬಾಬಾ’ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿತ್ತು.
ಇದಲ್ಲದೆ, ಕಾರ್ತಿಕ್ ಅವರ ಕೈಯಲ್ಲಿ ಸದ್ಯ ‘ಕ್ಯಾಪ್ಟನ್ ಇಂಡಿಯಾ’, ಸತ್ಯಪ್ರೇಮ್ ಕಿ ಕಥಾ’, ‘ಆಶಿಕಿ 3’ ಮತ್ತು ‘ಫ್ರೆಡ್ಡಿ’ ಚಿತ್ರಗಳಿವೆ.