ಸೆಲೆಬ್ರೆಟಿಗಳೆಂದ್ರೆ ಕೇವಲ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ ಊಟ ಮಾಡುವುದಿಲ್ಲ. ಅವರೂ ಕೂಡ ನಮ್ಮಂತೆ ಸ್ಟ್ರೀಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ನಟ ಕಾರ್ತಿಕ್ ಆರ್ಯನ್ ಜುಹುವಿನಲ್ಲಿ ಸ್ಟ್ರೀಡ್ ಫುಡ್ ಅನ್ನು ಸವಿದಿದ್ದಾರೆ.
ನಟ ಕಾರ್ತಿಕ್ ಆರ್ಯನ್ ತಾವು ಇತ್ತೀಚೆಗೆ ಖರೀದಿಸಿದ ಕಪ್ಪು ಲಂಬೋರ್ಗಿನಿಯನ್ನು ರಸ್ತೆ ಬದಿಯ ಚೈನೀಸ್ ಫುಡ್ ಸ್ಟಾಲ್ ನ ಮುಂದೆ ನಿಲ್ಲಿಸಿ ತನಗೆ ಮತ್ತು ತನ್ನ ಸ್ನೇಹಿತರಿಗೆ ಫಾಸ್ಟ್ ಫುಡ್ ಆರ್ಡರ್ ಮಾಡಿದ್ದಾರೆ. ನಟ ತನ್ನ ಲಂಬೋರ್ಗಿನಿ ಕಾರಿನ ಬಾನೆಟ್ನಲ್ಲಿ ಚೈನೀಸ್ ಆಹಾರವನ್ನು ಸವಿಯುತ್ತಿರುವ ಚಿತ್ರಗಳು ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದೆ.
ಕಾರ್ತಿಕ್ ಆರ್ಯನ್ ಜುಹುವಿನ ಸ್ನ್ಯಾಕ್ ಕಾರ್ನರ್ನಲ್ಲಿ ಚೈನೀಸ್ ಆಹಾರವನ್ನು ಸವಿದಿದ್ದಾರೆ. ಬೀದಿ ಬದಿಯಲ್ಲಿ ನಿಂತು ಆಹಾರ ಸವಿದ ನಟನ ಬಗ್ಗೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರನ್ನು ಡೌನ್ ಟು ಅರ್ಥ್, ಸಿಂಪಲ್ ವ್ಯಕ್ತಿ ಎಂದೆಲ್ಲಾ ಪ್ರಶಂಸಿದ್ದಾರೆ.
ಕಾರ್ತಿಕ್ ಆರ್ಯನ್ ಶನಿವಾರದಂದು ಸಲ್ಮಾನ್ ಖಾನ್ ಅವರ ಬಿಗ್ ಬಾಸ್ 15 ರ ಸೆಟ್ನಲ್ಲಿ ತಮ್ಮ ಮುಂಬರುವ ಚಿತ್ರ ಧಮಾಕಾವನ್ನು ಪ್ರಚಾರ ಮಾಡಿದ್ದರೆ. ಧಮಾಕಾ ನವೆಂಬರ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನಟ ಕಾರ್ತಿಕ್ ಆರ್ಯನ್ ಈ ಮೊದಲು ʼಲವ್ ಆಜ್ ಕಲ್ʼ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದರಲ್ಲಿ ಅವರು ಸಾರಾ ಅಲಿ ಖಾನ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಕಾರ್ತಿಕ್, ಪ್ಯಾರ್ ಕಾ ಪಂಚನಾಮಾ, ಆಕಾಶ್ ವಾಣಿ, ಪ್ಯಾರ್ ಕಾ ಪಂಚನಾಮಾ 2, ಲುಕಾ ಚುಪ್ಪಿ, ಪತಿ ಪತ್ನಿ ಔರ್ ವೋ ಮತ್ತು ಸೋನು ಕೆ ಟಿಟು ಕಿ ಸ್ವೀಟಿಯಂತಹ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.