ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಸೆಷನ್ಸ್ ಕೋರ್ಟ್ ಗೆ ಸಿಬಿಐ ನಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಘಟನೆಯ ಇಂಚಿಂಚು ಮಾಹಿತಿಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಎರಡು ಬಾರಿ ಯೋಗೇಶ್ ಗೌಡ ಹತ್ಯೆಗೆ ವಿಫಲ ಯತ್ನ ನಡೆಸಲಾಗಿದೆ. ರಾಜಕೀಯ ದುರುದ್ದೇಶದಿಂದ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಧಾರವಾಡದ ಹಳೆಯ ಮನೆಯಲ್ಲಿ 2016ರ ಜೂನ್ 14 ಮತ್ತು 11 ರಂದು ಹತ್ಯೆಗೆ ಸಂಚು ರೂಪಿಸಲಾಗಿತ್ತು. ಎರಡು ಬಾರಿ ಯೋಗೇಶ್ ಹತ್ಯೆ ವಿಫಲವಾಗಿದ್ದು ಮೂರನೇ ಸಲ ಪಕ್ಕಾ ಪ್ಲಾನ್ ಮಾಡಿಕೊಂಡು ಯೋಗೀಶ್ ಗೌಡರನ್ನು ಹತ್ಯೆ ಮಾಡಲಾಗಿದೆ.
2016ರ ಏಪ್ರಿಲ್ 1ರಿಂದ ಜೂನ್ 11 ರವರೆಗೆ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಬೆಂಗಳೂರಿನಲ್ಲಿ ಇದ್ದು ಈ ವೇಳೆ ಮತ್ತೊಬ್ಬ ಆರೋಪಿಗೆ 322 ಬಾರಿ ಕರೆ ಮಾಡಿದ್ದಾರೆ. ಅವರ ಚಲನವಲನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಶರಣಾದವರ ಮೇಲೆ ಮಾತ್ರ ಪೊಲೀಸರು ಕ್ರಮ ಕೈಗೊಂಡಿದ್ದರೆ? ಪ್ರಭಾವಿ ರಾಜಕಾರಣಿಗಳು, ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಶಂಕೆಯಿದೆ ಎನ್ನಲಾಗಿದ್ದು, ಸಿಬಿಐ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ ಎಂದು ಹೇಳಲಾಗಿದೆ.