ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಡೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗಿರಲಿವೆ.
ವೈದ್ಯಕೀಯ ಸೇವೆಗೆ ವಿನಾಯಿತಿ ಇದ್ದರೂ ಸಹ ತುಂಬು ಗರ್ಭಿಣಿಯೊಬ್ಬರಿಗೆ ಸಕಾಲಕ್ಕೆ ವೈದ್ಯರು ಹಾಗೂ ವಾಹನ ಲಭ್ಯವಾಗದ ಹಿನ್ನೆಲೆಯಲ್ಲಿ ಬುದ್ಧಿವಂತಿಕೆ ಮೆರೆದ ಮಹಿಳೆಯರು ವಾಟ್ಸಾಪ್ ವಿಡಿಯೋ ಮೂಲಕ ಮಹಿಳಾ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ನ ಕಿತ್ತೂರು ಚೆನ್ನಮ್ಮ ರಸ್ತೆಯ ವೈದ್ಯರ ಓಣಿಯಲ್ಲಿ ವಾಸವಾಗಿರುವ ವಾಸವಿ ಎಂಬ ಗರ್ಭಿಣಿಗೆ ಭಾನುವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಾಗ ಅವರ ನೆರವಿಗೆ ಧಾವಿಸಿದ ಸ್ಥಳೀಯ ಮಹಿಳೆಯರು, ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ವೈದ್ಯೆ ಪ್ರಿಯಾಂಕಾ ಅವರು ನೀಡಿದ ಮಾಹಿತಿಯಂತೆ ಹೆರಿಗೆ ಮಾಡಿಸಿದ್ದಾರೆ.