alex Certify ಹುಲಿಗಳ ಕಾದಾಟದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿಗಳ ಕಾದಾಟದ ವಿಡಿಯೋ ವೈರಲ್

ಎರಡು ಹುಲಿಗಳು ಕಾದಾಟದಲ್ಲಿ ಇರುವುದನ್ನು ನೋಡುವುದೇ ಒಂದು ಭಯಂಕರ ಅನುಭವ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಕಾಡು ಹುಲಿಯೊಂದು ಸಫಾರಿ ಹುಲಿಯೊಂದಿಗೆ ಕಾದಾಟಕ್ಕೆ ಇಳಿದಿರುವ ಈ ಘಟನೆಯನ್ನು ಭನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರೀಕರಿಸಲಾಗಿದೆ. 45 ಸೆಕೆಂಡ್‌ಗಳು ಇರುವ ಈ ವಿಡಿಯೋದಲ್ಲಿ, ಪರಸ್ಪರ ಕಾದಾಟದಲ್ಲಿ ಇರುವ ಹುಲಿಗಳ ನಡುವೆ ಕಬ್ಬಿಣದ ಬೇಲಿಯೊಂದು ಅಡ್ಡವಿದೆ.

ಬೇಲಿಯ ಇಕ್ಕೆಲಗಳಲ್ಲಿ ನಿಂತುಕೊಂಡೇ ಒಂದರ ಮೇಲೊಂದು ದಾಳಿ ಮಾಡಲು ಮುಂದಾಗುತ್ತಿರುವ ಹುಲಿಗಳನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಒಂದೇ ಹುಲಿ ಕನ್ನಡಿ ಮುಂದೆ ನಿಂತುಕೊಂಡು ತನ್ನದೇ ಪ್ರತಿಬಿಂಬದೊಂದಿಗೆ ಕಾದಾಡುತ್ತಿದೆ ಎನಿಸುವ ಮಟ್ಟದಲ್ಲಿ ಈ ಕಾದಾಟ ಗೋಚರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...