alex Certify ಮಗು ಕರುಣಿಸಲಿಲ್ಲ ಪ್ರೀತಿಸಿದ ಪತಿ, ಬೇರೆ ದಾರಿ ಕಂಡುಕೊಂಡ ಪತ್ನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಕರುಣಿಸಲಿಲ್ಲ ಪ್ರೀತಿಸಿದ ಪತಿ, ಬೇರೆ ದಾರಿ ಕಂಡುಕೊಂಡ ಪತ್ನಿ…!

ಬೆಂಗಳೂರು: ಪ್ರೀತಿಸಿ ಮದುವೆಯಾದ ವತಿಯಿಂದ 4 ವರ್ಷವಾದರೂ ಮಕ್ಕಳಾಗದ ಕಾರಣಕ್ಕೆ ಮಹಿಳೆ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ನೊಂದ ಪತಿರಾಯ ಪತ್ನಿಯನ್ನು ಒಂದು ಮಾಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

4 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ಮಕ್ಕಳಾಗಿರಲಿಲ್ಲ. ಆಸ್ಪತ್ರೆಯಲ್ಲಿ ಪತಿಯಿಂದ ಮಕ್ಕಳಾಗುವುದಿಲ್ಲ ಎನ್ನುವುದನ್ನು ತಿಳಿದ ಪತ್ನಿ ಜಗಳವಾಡಿದ್ದಾಳೆ. ತನಗೆ ಏನೆ ಆದರೂ ಗಂಡನೇ ಜವಾಬ್ದಾರಿ ಮತ್ತು ಹೊಸದಾಗಿ ಮದುವೆಯಾಗಿರುವ ಗಂಡನಿಗೂ ಕೂಡ ಏನೇ ಆದರೂ ಆತನೇ ಜವಾಬ್ದಾರಿ ಎಂದು ಬರೆದು ಪತ್ರಕ್ಕೆ ಮೊದಲ ಪತಿಯಿಂದ ಸಹಿ ಹಾಕಿಸಿಕೊಂಡಿದ್ದಾಳೆ.

ಮೊಬೈಲ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟು ಹೋಗಿದ್ದು, ತನ್ನನ್ನು ಹುಡುಕದಂತೆ ಪತ್ರ ಬರೆದಿಟ್ಟಿದ್ದು, ಬೇರೆ ಹುಡುಗನನ್ನು ಮದುವೆಯಾಗಿರುವುದಾಗಿ ತಿಳಿಸಲಾಗಿದೆ. ಮದುವೆಯಾದ ಹುಡುಗನೊಂದಿಗೆ ಇರುತ್ತೇನೆ. ಮೊದಲ ವತಿಯಿಂದ ಮಕ್ಕಳಾಗುವುದಿಲ್ಲ. ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ಸಾಯುತ್ತೇನೆ ಎಂದೆಲ್ಲ ಬರೆದಿಟ್ಟಿದ್ದಾರೆನ್ನಲಾಗಿದೆ. ಪತ್ನಿ ದೂರವಾಗಿದ್ದರಿಂದ ಪತಿ ದೂರು ನೀಡಿದ್ದು, ಬ್ಯಾಡರಹಳ್ಳಿ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...