alex Certify ಮೂರನೇ ಸಲ ಪತ್ನಿ ಪರಾರಿ, ರೋಸಿ ಹೋದ ಪತಿರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರನೇ ಸಲ ಪತ್ನಿ ಪರಾರಿ, ರೋಸಿ ಹೋದ ಪತಿರಾಯ

ಮಂಡ್ಯ: ಪೊಲೀಸ್ ಜೊತೆಗೆ ಪತ್ನಿ ಮೂರನೇ ಸಲ ಪರಾರಿಯಾಗಿದ್ದರಿಂದ ನೊಂದ ಪತಿರಾಯ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾನೆ.

ಚಾಮರಾಜನಗರ ಜಿಲ್ಲೆ ತಾಲೂಕಿನ ಮುಳ್ಳೂರು ನಿವಾಸಿಯಾಗಿರುವ ಪತಿ ಕೊಳ್ಳೇಗಾಲ ಪಟ್ಟಣದಲ್ಲಿ ವಾಸವಾಗಿದ್ದು ಈತನ ಪತ್ನಿಯೊಂದಿಗೆ ಕೊಳ್ಳೇಗಾಲ ಮೂಲದ ಪ್ರಸ್ತುತ ಮಂಡ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಕ್ರಮ ಸಂಬಂಧ ಬೆಳೆಸಿದ್ದ. ಇಬ್ಬರು ಹಿಂದೆ ಎರಡು ಸಲ ಮನೆ ಬಿಟ್ಟು ಹೋಗಿದ್ದು ಅವರನ್ನು ಕರೆಸಿ ರಾಜಿ ಪಂಚಾಯಿತಿ ಮಾಡಿ ಮಹಿಳೆಯನ್ನು ಗಂಡನೊಂದಿಗೆ ಕಳುಹಿಸಲಾಗಿತ್ತು.

ಈಗ ಮೂರನೇ ಸಲ ಪೊಲೀಸ್ ಪತ್ನಿಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ವ್ಯಕ್ತಿ ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪತ್ನಿಯೊಂದಿಗೆ ಸಂಬಂಧ ಇರುವ ವಿಡಿಯೋ ಮತ್ತು ಆಡಿಯೋ ಇಟ್ಟುಕೊಂಡಿರುವ ಪೊಲೀಸ್ ಆಕೆಯನ್ನು ಬೆದರಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ನನ್ನನ್ನು, ಮಕ್ಕಳನ್ನು ಪತ್ನಿಯಿಂದ ದೂರ ಮಾಡಿದ್ದು ಪತ್ನಿಯನ್ನು ಹುಡುಕಿಕೊಡಬೇಕು. ಪೊಲೀಸ್ ನಿಂದ ಪತ್ನಿಯನ್ನು ದೂರ ಮಾಡಿ ನನಗೆ ನ್ಯಾಯ ದೊರಕಿಸಿಕೊಡಿ ಎಂದು ನೊಂದ ವ್ಯಕ್ತಿ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...