ಬೆಂಗಳೂರು: ಅಶ್ಲೀಲ ಫೋಟೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಿಶೀಲನೆ ನಡೆಸಿದ ಪೊಲೀಸರು ಚಿಕ್ಕಜಾಲದ ವಿಶ್ವನಾಥ್ ನನ್ನು ಬಂಧಿಸಿದ್ದಾರೆ.
2 ಮೊಬೈಲ್ ಜಪ್ತಿ ಮಾಡಲಾಗಿದ್ದು 20 ಅಶ್ಲೀಲ ಫೋಟೋ ಕಂಡು ಬಂದಿವೆ. ಚಿಕ್ಕಜಾಲದಲ್ಲಿ ವಾಸವಾಗಿರುವ ವಿಶ್ವನಾಥ್ ಅಸ್ಸಾಂ ಮೂಲದವರಾಗಿದ್ದು ಕೋಳಿ ಫಾರಂ ನಡೆಸುತ್ತಿದ್ದಾರೆ. ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಾಧ್ಯಾಪಕರೊಬ್ಬರ ಫೋಟೋ ತೆಗೆದುಕೊಂಡು ಅದನ್ನು ಎಡಿಟ್ ಮಾಡಿದ್ದಾರೆ.
ಅಶ್ಲೀಲ ಫೋಟೋಗಳನ್ನು ಪ್ರಾಧ್ಯಾಪಕರಿಗೆ ವಾಟ್ಸಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದನೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.