
ಭಾರತೀಯ ರೈಲ್ವೇ ಇಲಾಖೆ ಸಮರ್ಪಕವಾದ ಟ್ರ್ಯಾಕ್ ನಿರ್ವಹಣೆ ಯೋಜನೆಗಾಗಿ 6 ತಿಂಗಳ ಸಮಯ ಹಾಗೂ 40 ಕೋಟಿ ರೂಪಾಯಿಯನ್ನ ವ್ಯಯಿಸಿದೆ. 130 ಕಿಲೋ ಮೀಟರ್ ದೂರದ ಈ ಟ್ರ್ಯಾಕ್ ಎಷ್ಟು ನಾಜೂಕಾಗಿದೆ ಅಂತಾ ನೋಡೋಕೆ ರೈಲ್ವೇ ಇಲಾಖೆ ವಿಭಿನ್ನವಾದ ಪರೀಕ್ಷೆಯೊಂದನ್ನ ಮಾಡಿದೆ.
ವೇಗವಾಗಿ ಚಲಿಸುತ್ತಿರುವ ರೈಲಿನ ತುದಿಯಲ್ಲಿ ನೀರು ತುಂಬಿದ ಗಾಜಿನ ಲೋಟ ಇರಿಸಲಾಗಿದೆ.
ಬೆಂಗಳೂರಿನಿದ ಮೈಸೂರಿನವರೆಗೆ ಬರೋಬ್ಬರಿ 100 ಕಿಲೋಮೀಟರ್ ದೂರ ಕ್ರಮಿಸಿದ್ರೂ ಈ ಗಾಜಿನ ಲೋಟ ಅಲುಗಾಡದೇ ಹಾಗೇ ಸ್ಥಿರವಾಗಿ ನಿಂತಿದೆ.
ಭಾರತೀಯ ರೈಲ್ವೇ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.