ಬೆಂಗಳೂರು: ಆರ್.ಆರ್. ನಗರ, ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯುತ್ತಿದೆ. ಆರ್.ಆರ್. ನಗರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡ 7.1 ರಷ್ಟು ಮತದಾನವಾಗಿದೆ. ಶಿರಾದಲ್ಲಿ ಬೆಳಗ್ಗೆ 9 ಗಂಟೆಗೆ ಶೇಕಡ 8.25 ರಷ್ಟು ಮತದಾನವಾಗಿದೆ ಎನ್ನಲಾಗಿದೆ.
ತುಮಕೂರು ಜಿಲ್ಲೆ ಶಿರಾ ಕ್ಷೇತ್ರದ ಕುರುಬರ ರಾಮನಹಳ್ಳಿಯಲ್ಲಿರುವ ವೃದ್ಧ ರಾಮಣ್ಣನವರು ನಡೆಯಲು ಆಗದಿದ್ದರೂ ಕಷ್ಟಪಟ್ಟು ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. ಮತಗಟ್ಟೆಯಿಂದ 100 ಮೀಟರ್ ದೂರದಲ್ಲಿರುವ ತಮ್ಮ ಮನೆಯಿಂದ ವಾಕರ್ ನೆರವಿನಿಂದ ಮತಗಟ್ಟೆಗೆ ಆಗಮಿಸಿದ ಅವರು ಹ್ಯಾಂಡ್ ಗ್ಲೌಸ್ ತೊಡುವುದಕ್ಕೂ ಕೂಡ ಕಷ್ಟಪಟ್ಟರೂ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಮತ ಚಲಾವಣೆ ಮಾಡಲು ಮತದಾರರಿಗೆ ಗ್ಲೌಸ್ ವಿತರಿಸಲಾಗಿದೆ. ಮತ ಚಲಾಯಿಸಿದ ನಂತರ ವಿಲೇವಾರಿಗೆ ಸಮಸ್ಯೆಯಾಗಿದೆ. ಡಸ್ಟ್ ಬಿನ್ ಗೆ ಗ್ಲೌಸ್ ಹಾಕಲು ಸೂಚನೆ ನೀಡಿದರೂ ಜನ ಎಲ್ಲೆಂದರಲ್ಲಿ ಗ್ಲೌಸ್ ಎಸೆಯುತ್ತಿದ್ದಾರೆ.
ಆರ್.ಆರ್. ನಗರದ ಅಭ್ಯರ್ಥಿಗಳಾದ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಹಾಗೂ ಶಿರಾ ಕ್ಷೇತ್ರದ ಅಭ್ಯರ್ಥಿಗಳಾದ ರಾಜೇಶ್ ಗೌಡ, ಟಿ.ಬಿ. ಜಯಚಂದ್ರ, ಅಮ್ಮಾಜಮ್ಮ ಅವರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಮತದಾನ ಮಾಡಿದ್ದಾರೆ.
ಆರ್.ಆರ್. ನಗರದಲ್ಲಿ ಆಟೋ ಚಾಲಕ ಆರೀಫ್ ಅವರು ಮತದಾನ ಮಾಡುವವರಿಗೆ ಉಚಿತ ಸೇವೆ ನೀಡುತ್ತಿದ್ದಾರೆ.