
ಮೈಸೂರಿನ ಊಟಿ ರಸ್ತೆಯ ದತ್ತ ನಗರದಲ್ಲಿ ಈ ಶುಕವನ ಇದೆ. ಈ ಶುಕವನದಲ್ಲಿ ತರಹೇವಾರಿ ರೀತಿಯ ಗಿಳಿಗಳಿವೆ, ಅವಧೂತಾ ದತ್ತ ಪೀಠದ ಆವರಣದಲ್ಲಿ ಗಿಳಿಗಳಿಗೆ ಆಶ್ರಯ ನೀಡಲಾಗಿದೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಸುಂದರ ಗಿಳಿಗಳಿಗೆ ಆಶ್ರಯ ನೀಡಿದ್ದಾರೆ. ಇಲ್ಲಿ ನಿಮಗೆ ಎತ್ತ ನೋಡಿದ್ರೂ ಗಿಳಿಗಳೇ ಕಾಣ ಸಿಗುತ್ತವೆ. ಇಲ್ಲಿ ನೀವು ಗಿಳಿಗಳಿಗೆ ಆಹಾರ ನೀಡಬಹುದು. ಅಷ್ಟೇ ಯಾಕೆ ಗಿಳಿಗಳನ್ನ ಕೈ ಮೇಲೆ ಕೂರಿಸಿಕೊಂಡು ಫೋಟೋಗಳನ್ನೂ ಕ್ಲಿಕ್ಕಿಸಿಕೊಳ್ಳಬಹುದು. ಅಲ್ಲದೇ ಇಲ್ಲಿ ಕಾರ್ಯಸಿದ್ಧಿ ಆಂಜನೇಯನ ದೇಗುಲ ಕೂಡ ಇದ್ದು ಇಲ್ಲಿಗೂ ನೀವು ಭೇಟಿ ನೀಡಬಹುದಾಗಿದೆ.
ಪರಿಶೀಲನೆ ವೇಳೆ ಬಯಲಾಯ್ತು ಅಸಲಿಯತ್ತು: ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಿಸುತ್ತಿದ್ದ ಖದೀಮ ಅರೆಸ್ಟ್
ಸದ್ಯ ಕೋವಿಡ್ ಹಿನ್ನೆಲೆ ಶುಕವನ ಭೇಟಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಶುಕವನ ಮತ್ತೊಮ್ಮೆ ಪ್ರವಾಸಿಗರಿಗೆ ಮುಕ್ತಯವಾಗುತ್ತಿದ್ದಂತೆಯೇ ಮಿಸ್ ಮಾಡದೇ ಈ ಪಕ್ಷಿಧಾಮಕ್ಕೆ ಭೇಟಿ ನೀಡಿ. ಗಿಳಿಗಳ ಸೌಂದರ್ಯ ನಿಮ್ಮ ಕಣ್ಣಿಗೆ ರಸದೌತಣ ನೀಡೋದ್ರಲ್ಲಿ ಎರಡು ಮಾತಿಲ್ಲ.


