ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗುವ ಕನಸು ಕಂಡಿದ್ದ ಹೆಚ್. ವಿಶ್ವನಾಥ್ ಆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾರಣ ನಿರಾಸೆಯಾಗಿತ್ತು.
ಆದರೆ ತಮ್ಮ ಸರ್ಕಾರ ರಚನೆಗೆ ಕಾರಣಕರ್ತರಾಗಿದ್ದ ಹೆಚ್. ವಿಶ್ವನಾಥ್ ಅವರ ಕೈ ಬಿಡದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದ್ದು, ಹೀಗಾಗಿ ವಿಶ್ವನಾಥ್ ಅವರ ಸಚಿವ ಸ್ಥಾನದ ಕನಸು ಗರಿಗೆದರಿತ್ತು.
ಈ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್ ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ವಿಶ್ವನಾಥ್ ಸಚಿವರಾಗಲು ಅರ್ಹರಲ್ಲ ಎಂದು ವಾದಿಸಲಾಗಿತ್ತು. ಹೈಕೋರ್ಟ್ ಇದನ್ನು ಮಾನ್ಯ ಮಾಡಿದ್ದು, ನಾಮ ನಿರ್ದೇಶನಗೊಂಡಿರುವ ವಿಶ್ವನಾಥ್ ಸಚಿವ ಸ್ಥಾನಕ್ಕೆ ಅರ್ಹರಲ್ಲ ಎಂದಿತ್ತು.
BIG NEWS: ವಿಧಾನ ಮಂಡಲ ಅಧಿವೇಶನ ಆರಂಭ – ರಾಜ್ಯಪಾಲರ ಭಾಷಣಕ್ಕೆ ಕಾಂಗ್ರೆಸ್ ವಿರೋಧ
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಸುಪ್ರೀಂ ಕೋರ್ಟ್ ಕೂಡಾ, ಸಾರ್ವಜನಿಕರಿಂದ ಆಯ್ಕೆಯಾಗದೆ ನಾಮ ನಿರ್ದೇಶನಗೊಂಡಿರುವ ವಿಶ್ವನಾಥ್ ಸಚಿವರಾಗಲು ಅರ್ಹರಲ್ಲ ಎಂದು ಹೇಳಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.