
ಅವರು ಹೈ-ಫೈ ಶಾಲೆಯಲ್ಲಿ ಓದುತ್ತಿರೋ ಶಾಲಾ ವಿದ್ಯಾರ್ಥಿನಿಯರು. ಆದರೆ ಅವರು ನಡು ರಸ್ತೆಯಲ್ಲಿ ಹೊಡೆದಾಡಿರೋ ರೀತಿ ನೋಡ್ತಿದ್ರೆ, ಎಂಥವರೂ ಕೂಡಾ ಶಾಕ್ ಆಗುವ ಹಾಗಿತ್ತು.
ನಗರದಲ್ಲಿ ಶಾಲಾ ಸಮವಸ್ತ್ರದಲ್ಲಿ ಹೊಡೆದಾಡುತ್ತಿರುವ ವಿದ್ಯಾರ್ಥಿನಿಯರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸುದ್ದಿ ಮಾಡ್ತಿದೆ. ನಗರದ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿನಿಯರು ಶಾಲೆಯ ಹೊರಗೆನೇ ಕೂದಲು ಹಿಡಿದು ಎಳೆದಾಡಿಕೊಂಡು, ಮುಖ-ಮೂತಿ ನೋಡದೇ ಹೊಡೆದಾಡಿಕೊಂಡಿದ್ದರು. ಅವರು ಹೊಡೆದಾಡಿಕೊಳ್ಳೊ ಪರಿ ನೋಡಿ ಜನರು ಶಾಕ್ ಆಗಿದ್ದಾರೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಆಭರಣ ಖರೀದಿಸುವವರಿಗೆ ಇದು ಸಕಾಲ, ಭಾರೀ ಕುಸಿತ ಕಂಡಿದೆ ಚಿನ್ನದ ದರ!
ಬಿಷಪ್ ಕಾಟನ್ ಶಾಲೆಯ ವಿದ್ಯಾರ್ಥಿನಿಯರು ಹೊಡೆದಾಡಿಕೊಳ್ಳೊದು ಈ ವಿಡಿಯೋದಲ್ಲಿ ಕಾಣಿಸುತ್ತೆ. ಹೊಡೆದಾಟಕ್ಕೆ ಕಾರಣ ಹುಡುಗನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದ್ದ ಪೋಸ್ಟ್ ಅಂತ ಹೇಳಲಾಗುತ್ತಿದೆ. ಮೊದಲು ವಾದ – ವಿವಾದದಲ್ಲಿ ಶುರುವಾದ ಜಗಳ ಕೊನೆಗೆ. ಹೊಡೆದಾಟದಲ್ಲಿ ಬದಲಾಗಿದೆ. ಈ ಹುಡುಗಿರ ವಾರ್ನಲ್ಲಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.