
ಬೆಂಗಳೂರು: ರಾಜ್ಯಾದ್ಯಂತ ಭಾನುವಾರದ ಲಾಕ್ಡೌನ್ ಜಾರಿಯಲ್ಲಿದೆ. ಸೋಮವಾರ ಬೆಳಗ್ಗೆವರೆಗೆ ಕಂಪ್ಲೀಟ್ ಲಾಕ್ಡೌನ್ ಇರಲಿದ್ದು ಯಾರು ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡುವ ಜೊತೆಗೆ ಕೇಸ್ ದಾಖಲಿಸಲಾಗುವುದು. ಅಲ್ಲದೆ, ಬೇಕಾಬಿಟ್ಟಿಯಾಗಿ ತಿರುಗಾಡುವವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಸಜ್ಜಾಗಿದ್ದಾರೆ.
ಇನ್ನು ಜುಲೈ 14 ರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್ಡೌನ್ ಜಾರಿಯಾಗಲಿದ್ದು ಲಾಕ್ಡೌನ್ ನಿಯಮದಂತೆ ನಾಗರಿಕರು ಅನಗತ್ಯವಾಗಿ ರಸ್ತೆಗಿಳಿದರೆ ಕ್ರಮ ಕೈಗೊಳ್ಳಲಾಗುವುದು. ರಸ್ತೆಗೆ ಇಳಿಯುವ ವಾಹನ ಜಪ್ತಿ ಮಾಡುವ ಜೊತೆಗೆ ದಂಡ ವಿಧಿಸಲಾಗುವುದು.