ಮಹಿಳೆಯರೇ ನೀವು ಈ ಸುದ್ದಿ ಓದಲೇಬೇಕು. ಈ ವಿಡಿಯೋ ನೋಡಿದರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಯಾಕೆ ಅಂತೀರಾ..? ಅಡುಗೆಗೆ ಬಳಸುವ ಕೊತ್ತಂಬರಿ ಸೊಪ್ಪಿನ ಸ್ಥಿತಿ ಹೇಗಿದೆ ಒಮ್ಮೆ ನೋಡಿ. ಮಾರುಕಟ್ಟೆಯಿಂದ ಮನೆಗೆ ತರುವ ಕೊತ್ತಂಬರಿ ಸೊಪ್ಪು ಎಷ್ಟು ಸುರಕ್ಷಿತ ಹಾಗೂ ಸ್ವಚ್ಛವಾಗಿರುತ್ತದೆ ಅನ್ನೋದನ್ನ ಒಮ್ಮೆ ನೋಡಿ.
ಹೌದು, ಇಲ್ಲೊಬ್ಬ ವ್ಯಾಪಾರಿ ಹೊಲದಿಂದ ತಂದ ಕೊತ್ತಂಬರಿ ಸೊಪ್ಪನ್ನು ಕೊಳಚೆ ನೀರಿನಲ್ಲಿ ತೊಳೆದು ಕ್ಲೀನ್ ಮಾಡಿದ್ದಾನೆ. ಈ ಘಟನೆ ನಡೆದಿರೋದು ಹುಬ್ಬಳ್ಳಿಯಲ್ಲಿ. ಗಿರಿಯಾಲ ಮಾರ್ಗದಲ್ಲಿರುವ ನಾಲೆಯಲ್ಲಿ ಈ ತರಕಾರಿ ವ್ಯಾಪಾರಿ ಕೊತ್ತಂಬರಿ ಸೊಪ್ಪನ್ನು ತೊಳೆದಿದ್ದಾನೆ. ಈ ವ್ಯಾಪಾರಿ ಸೊಪ್ಪು ತೊಳೆಯುವ ವಿಡಿಯೋ ವೈರಲ್ ಆಗಿದೆ.
ಈ ನಾಲೆಯಲ್ಲಿ ಕೊಳಚೆ ನೀರು ಬಿಡಲಾಗುತ್ತದೆ. ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹರಿಯುವ ನೀರೆಲ್ಲಾ ಈ ನಾಲೆಗೆ ಸೇರಬೇಕು. ಇಂತಹ ಕೊಳಕು ನೀರಿನಲ್ಲಿ ಕೊತ್ತಂಬರಿ ತೊಳೆದಿದ್ದಾನೆ ಈ ವ್ಯಾಪಾರಿ. ಇನ್ನು ಕೊತ್ತಂಬರಿ ತೊಳೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಇದನ್ನು ಗಮನಿಸಿದ್ದಾರೆ.
ಅಷ್ಟೆ ಅಲ್ಲ ಈ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಘಟನೆ ಒಂದು ಉದಾಹರಣೆ ಅಷ್ಟೆ. ಈ ರೀತಿಯ ಎಷ್ಟೋ ಘಟನೆಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹಾಗಾಗಿ ನೀವು ತರಕಾರಿ ಬಳಸುವ ಮುನ್ನ ಎಚ್ಚರ.