
ಬೆಂಗಳೂರು: ಬೆಂಗಳೂರಿನ ಯಲಹಂಕ ಡೇರಿ ಸರ್ಕಲ್ ಬಳಿ ನಿರ್ಮಿಸಿರುವ ಮೇಲ್ಸೇತುವೆಗೆ ಸಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರಿಡಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮತ್ತೊಮ್ಮೆ ನಿರ್ಣಯ ಕೈಗೊಳ್ಳಲಾಗಿದೆ.
ಈ ಹಿಂದೆಯೇ ಸಾವರ್ಕರ್ ಹೆಸರಿಡಲು ತೀರ್ಮಾನ ಕೈಗೊಳ್ಳಲಾಗಿತ್ತು. ವಿವಾದ ಉಂಟಾದ ನಂತರ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು ಈಗ ಬಿಬಿಎಂಪಿ ಸಭೆಯಲ್ಲಿ ಮತ್ತೊಮ್ಮೆ ವೀರ ಸಾವರ್ಕರ್ ಹೆಸರಿಡಲು ಅನುಮೋದನೆ ನೀಡಲಾಗಿದೆ.
ಮೇ 28ರಂದು ನಿಗದಿಯಾಗಿದ್ದ ನಾಮಕರಣ ಕಾರ್ಯಕ್ರಮ ವಿರೋಧ ಪಕ್ಷದ ನಾಯಕರ ಆಕ್ಷೇಪದಿಂದಾಗಿ ಮುಂದೂಡಿಕೆಯಾಗಿದ್ದು, ಈಗ ಬಿಬಿಎಂಪಿ ಸಭೆಯಲ್ಲಿ ಮತ್ತೊಮ್ಮೆ ತೀರ್ಮಾನ ಕೈಗೊಂಡಿದೆ.