alex Certify ʼಡಿಸಿಗೆ ಸೂಪರ್​ ಪವರ್​ ಎಂದು ಹೇಳಿ ಪ್ರಧಾನಿ ಜನರನ್ನ ಮೂರ್ಖರನ್ನಾಗಿಸಿದ್ದಾರೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡಿಸಿಗೆ ಸೂಪರ್​ ಪವರ್​ ಎಂದು ಹೇಳಿ ಪ್ರಧಾನಿ ಜನರನ್ನ ಮೂರ್ಖರನ್ನಾಗಿಸಿದ್ದಾರೆʼ

ಮಂಗಳವಾರ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನಿ ಮೋದಿ ಕೊರೊನಾ ತಡೆಗಾಗಿ ಡಿಸಿಗಳು ಫೀಲ್ಡ್ ಕಮಾಂಡರ್​ಗಳಂತೆ ಕೆಲಸ ಮಾಡಬೇಕು. ಹಾಗೂ ಕೊರೊನಾ ವಿರುದ್ಧದ ಹೋರಾಟ ನಡೆಸಲು ಡಿಸಿಗೆ ಸೂಪರ್​ ಪವರ್​ ನೀಡಲಾಗುವುದು ಎಂದು ಹೇಳಿದ್ದರು.

ಇಂದು ಈ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ. ಖಾದರ್​​ ಜಿಲ್ಲಾಧಿಕಾರಿಗಳಿಗೆ ಅಂತಹ ಯಾವ ಹೊಸ ಅಧಿಕಾರ ನೀಡಿದ್ದೀರಾ ಎಂದು ಪ್ರಶ್ನೆ ಮಾಡಿದ್ರು.

ಡಿಸಿಗಳನ್ನ ಪ್ರಧಾನಿ ಕಮಾಂಡರ್​ ಇನ್​ ಚೀಫ್​ ಎಂದು ಕರೆದಿದ್ದಾರೆ. ಡಿಸಿಗೆ ಈ ಹಿಂದೆನೇ ಮ್ಯಾಜಿಸ್ಟ್ರೇಟ್​ ಪವರ್ ಇತ್ತು. ಕಮಾಂಡರ್​ ಇನ್​ ಚೀಫ್​ ಎಂದು ಕರೆದ ಬಳಿಕ ಅವರಿಗೆ ಯಾವ ವಿಶೇಷ ಅಧಿಕಾರವನ್ನ ನೀವು ಕೊಟ್ಟಿದ್ದೀರಾ..? ಸರಿಯಾಗಿ ಕಾರ್ಯನಿರ್ವಹಿಸದ ತಹಶೀಲ್ದಾರ್ ಹಾಗೂ ಎಸಿ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ. ಡಿಹೆಚ್​ಒ ಹಾಗೂ ವೈದ್ಯರು ಸರಿಯಾಗಿ ಕೆಲಸ ಮಾಡದೇ ಇದ್ದರೆ ಅವರನ್ನ ವರ್ಗ ಮಾಡುವ ಅಧಿಕಾರ ಡಿಸಿಗೆ ಇದೆಯಾ..? ಏನೂ ಪವರ್​ ಕೊಡದೇ ಅವರನ್ನ ಕಮಾಂಡರ್​ ಇನ್​ ಚೀಫ್​ ಎಂದು ಅದು ಹೇಗೆ ಕರೆದ್ರಿ ಎಂದು ಪ್ರಶ್ನೆ ಮಾಡಿದ್ರು.

ಕೇಂದ್ರ ಸರ್ಕಾರಕ್ಕೆ ಜನರ ಕಷ್ಟ ಇನ್ನೂ ಅರ್ಥವಾಗಿಲ್ಲ. ಸುಮ್ಮನೇ ಡಿಸಿಗೆ ಸೂಪರ್​ ಪವರ್​ ಎಂದು ಹೇಳಿ ಜನರನ್ನ ಮೂರ್ಖರನ್ನಾಗಿ ಮಾಡಿದ್ದಾರೆ. ಗ್ರಾಮ ಮಟ್ಟದಲ್ಲಿ ಟಾಸ್ಕ್​ ಫೋರ್ಸ್ ರಚನೆ ಮಾಡಿ ಅಂತಾ ಪ್ರಧಾನಿ ಹೇಳ್ತಾರೆ. ನಮ್ಮಲ್ಲಿ ಟಾಸ್ಕ್​ ಫೋರ್ಸ್ ರಚನೆಯಾಗಿ 2 ತಿಂಗಳ ಮೇಲಾಗಿದೆ. ಇದರಲ್ಲೇ ನಮ್ಮ ಪ್ರಧಾನಿ ಎಷ್ಟು ಹಿಂದೆ ಇದ್ದಾರೆ ಅನ್ನೋದು ತಿಳಿಯುತ್ತೆ ಎಂದು ವ್ಯಂಗ್ಯವಾಡಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...