ಮೋದಿ 2.0 ಸರ್ಕಾರದ 3ನೇ ಬಜೆಟ್ ಮಂಡನೆಯಾಗಿದ್ದು ಇದರಲ್ಲಿ ಬೆಂಗಳೂರಿನ ಮೆಟ್ರೋ ವ್ಯವಸ್ಥೆಗೆ ಬಂಪರ್ ದೊರೆತಿದೆ.
ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿಗೆ ಮತ್ತೆರಡು ಮೆಟ್ರೋ ಮಾರ್ಗ ಘೋಷಣೆ ಮಾಡಿದ್ರು.
2 ಎ ಹಾಗೂ 2 ಬಿ ಹಂತದ ಮೆಟ್ರೋ ಕಾಮಗಾರಿಯನ್ನ ಘೋಷಿಸಲಾಗಿದೆ. ಈ ಎರಡು ಮೆಟ್ರೋ ಮಾರ್ಗಗಳು 58.19 ಕಿಲೋ ಮೀಟರ್ ಇರಲಿದ್ದು ಇದಕ್ಕೆ ಕೇಂದ್ರ ಸರ್ಕಾರ 14,788 ಕೋಟಿ ರೂಪಾಯಿ ಮೀಸಲಿಟ್ಟಿದೆ.