ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರದಲ್ಲಿ ಬದಲಾವಣೆ ತರಲಾಗುವುದು. ಈ ಶೈಕ್ಷಣಿಕ ಸಾಲಿನಿಂದ ಬಣ್ಣ ಬಣ್ಣದ ಸಮವಸ್ತ್ರ ನೀಡಲಾಗುವುದು.
ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ಸಮವಸ್ತ್ರದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳಿಗೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಈ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಶಾಲಾ ಮಕ್ಕಳ ಸಮವಸ್ತ್ರದ ಬಣ್ಣ ಆಯ್ಕೆ ಮಾಡಿಕೊಳ್ಳಲು ಎಸ್ಡಿಎಂಸಿ ನಿರ್ಧಾರ ಕೈಗೊಳ್ಳಲಿದೆ. ಎರಡನೇ ಜೊತೆ ಸಮವಸ್ತ್ರದ ಹಣವನ್ನು ಶಿಕ್ಷಣ ಇಲಾಖೆ ಎಸ್ಡಿಎಂಸಿಗಳಿಗೆ ವರ್ಗಾಯಿಸಿದ್ದು ಅವರ ಆಯ್ಕೆಯ ಬಣ್ಣದ ಸಮವಸ್ತ್ರಗಳನ್ನು ಹೊಲಿಸಿ ವಿದ್ಯಾರ್ಥಿಗಳಿಗೆ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.