
ಉಡುಪಿ ಜಿಲ್ಲೆ ಕುಂದಾಪುರ ಕಿರಿಮಂಜೇಶ್ವರ ಬಳಿ ಕೊಡೇರಿ ಸಮುದ್ರದಲ್ಲಿ ಬಂಡೆಗೆ ನಾಡದೋಣಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.
ಭಾರೀ ಮಳೆ ಮತ್ತು ಅಲೆಗಳ ಏರಿಳಿತವಿದ್ದ ಕಾರಣ ನಿಯಂತ್ರಣ ತಪ್ಪಿದ ನಾಡದೋಣಿ ಬಂಡೆಗೆ ಡಿಕ್ಕಿ ಹೊಡೆದು ಛಿದ್ರವಾಗಿದೆ. 10 ಮೀನುಗಾರರ ಪೈಕಿ ಮೂವರು ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಸಲಾಗಿದೆ. ಸಾಗರಶ್ರೀ ಎಂಬ ಹೆಸರಿನ ನಾಡದೋಣಿ ಹಾನಿಯಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.