ವಿಜಯನಗರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಸಭೆ ಸಮಾರಂಭ, ಜಾತ್ರೆ, ಧಾರ್ಮಿಕ ಕಾರ್ಯಗಳ ಮೇಲೆ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಇದೀಗ ವಿಜಯಪುರ ಜಿಲ್ಲೆಯ ಹರಪನಹಳ್ಳಿ ಉಚ್ಚಂಗಿ ದುರ್ಗ ಉತ್ಸವಾಂಭಾ ಜಾತ್ರೆ ರದ್ದಾಗಿದೆ.
ಏಪ್ರಿಲ್ 12ರಿಂದ 15ರವರೆಗೆ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ ಕೂಡ ಸಾವಿರಾರು ಭಕ್ತರು ಜಾತ್ರೆಗಾಗಿ ಆಗಮಿಸಿದ್ದಾರೆ. ಆದರೆ ಜಾತ್ರೆ ರದ್ದಾದ ಹಿನ್ನೆಲೆಯಲ್ಲಿ ಭಕ್ತರನ್ನು ವಾಪಸ್ ಕಳುಹಿಸಲಾಗುತ್ತಿದೆ.
ಮ್ಯಾಟ್ರಿಮೋನಿ ಜಾಹೀರಾತು ಮೂಲಕ 69 ವರ್ಷದ ಸಂಗಾತಿಯನ್ನು ಕಂಡುಕೊಂಡ 73ರ ಮಹಿಳೆ
ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ದೇವಸ್ಥಾನದ ಗುಡ್ಡದ ಮೇಲೆ, ಪಾದಗಟ್ಟೆ ಹಾಗೂ ಹಾಲಮ್ಮ ತೋಪಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭಕ್ತರನ್ನು ವಾಪಸ್ ಕಳುಹಿಸುತ್ತಿದೆ.