
ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಂಗಳಮುಖಿಯರು ಯುವಕನೊಬ್ಬನನ್ನು ಕೊಲೆ ಮಾಡಿದ್ದಾರೆ. ಬಳಿಕ ಅದನ್ನು ಅಪಘಾತವೆನ್ನುವಂತೆ ಬಿಂಬಿಸಿದ್ದಾರೆ.
ಕೋನಪ್ಪನ ಅಗ್ರಹಾರ ನಿವಾಸಿಯಾಗಿರುವ ದೇವಿ ಅಲಿಯಾಸ್ ಅಶೋಕ್ ಕುಮಾರ್ ಮತ್ತು ನಿತ್ಯಾ ಅಲಿಯಾಸ್ ರಾಮಕೃಷ್ಣ ಬಂಧಿತ ಆರೋಪಿಗಳು. ಇವರು ಭಿಕ್ಷೆ ಬೇಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರ ತಾಲೂಕು ಹರಿಸಂದ್ರ ಕಾಳೇಗೌಡನದೊಡ್ಡಿ ರಾಜೇಂದ್ರಕುಮಾರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ನೈಸ್ ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಮೃತರ ಕುಟುಂಬದವರಿಗೆ ಸುಳ್ಳು ಮಾಹಿತಿ ನೀಡಿದ್ದಾರೆನ್ನಲಾಗಿದೆ.
ರಾಜೇಂದ್ರ ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಗೆಳೆತನ ಬೆಳೆಸಿದ್ದು ತಾನು ಸೀರೆ, ಬಳೆ ಮಹಿಳೆಯರ ವೇಷಭೂಷಣ ಹಾಕಿಕೊಂದು ಭಿಕ್ಷೆ ಬೇಡುತ್ತಿದ್ದ. ಇದರಿಂದ ಆಕ್ರೋಶಗೊಂಡ ಮಂಗಳಮುಖಿಯರು ಹತ್ಯೆ ಮಾಡಿ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಬಿಂಬಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.