ಬೆಂಗಳೂರು: ಶಿಕ್ಷಕರ ಕಡ್ಡಾಯ ವರ್ಗಾವಣೆ ನಿಯಮದ ಬದಲಿಗೆ ಹೊಸ ವರ್ಗಾವಣೆ ಕಾಯ್ದೆ ನಿಯಮ ಅಂತಿಮಗೊಳಿಸಲಾಗಿದ್ದು ಆಗಸ್ಟ್ 20 ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗುವುದು.
ಶಾಲೆ ಆರಂಭಕ್ಕೆ ಮೊದಲೇ ಶಿಕ್ಷಕರಿಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಆಗಸ್ಟ್ 15 ರೊಳಗೆ ವೇಳಾಪಟ್ಟಿ ಬಿಡುಗಡೆ ಮಾಡಲಿದ್ದು, 20 ರಿಂದಲೇ ಪ್ರಕ್ರಿಯೆ ಆರಂಭಿಸಲಾಗುವುದು.
ಕೊರೋನಾ ಕಾರಣದಿಂದ ಶಿಕ್ಷಕರ ವರ್ಗಾವಣೆ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು. ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವೇಳಾಪಟ್ಟಿ ಪ್ರಕಟಿಸಲು ಸೂಚಿಸಿದ್ದಾರೆ. ಹೊಸ ವರ್ಗಾವಣೆ ಕಾಯ್ದೆ ನಿಯಮ ಅಂತಿಮಗೊಳಿಸಲಾಗಿದ್ದು, ಬಹುತೇಕ ಆಗಸ್ಟ್ 20 ರಿಂದಲೇ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ ಎನ್ನಲಾಗಿದೆ.