ಬೆಂಗಳೂರಿನ ಶಾಪಿಂಗ್ ಪ್ಲೇಸ್‌ಗಳಲ್ಲಿ ಚರ್ಚ್‌ಸ್ಟ್ರೀಟ್ ಕೂಡ ಒಂದು. ವೀಕೆಂಡ್ ಬಂದ್ರೆ ಸಾಕು ಇಲ್ಲಿ ಜನ ಸಂದಣಿ, ವಾಹನ ದಟ್ಟಣೆ ಹೆಚ್ಚಾಗಿಯೇ ಇರುತ್ತದೆ. ಕೆಲವೊಮ್ಮೆ ಹಬ್ಬ ಹರಿದಿನಗಳಲ್ಲಂತೂ ಇಲ್ಲಿ ಕಾಲಿಡೋಕೆ ಆಗೋದಿಲ್ಲ. ಅಷ್ಟು ಜನ ಸಂದಣಿ ಸೇರಿರುತ್ತದೆ. ಆದರೆ ಇನ್ಮುಂದೆ ಹಾಗಾಗಲು ಪೊಲೀಸರು ಬಿಡೋದಿಲ್ಲ.
ಹೌದು, ಇನ್ಮುಂದೆ ವೀಕೆಂಡ್‌ನಲ್ಲಿ ಚರ್ಚ್‌ಸ್ಟ್ರೀಟ್‌ಗೆ ಹೋಗಬೇಕು ಅಂದರೆ ವಾಹನಗಳನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಸುತ್ತಾಡಬೇಕು. ವಾರಾಂತ್ಯದಲ್ಲಿ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲು ನಿರ್ಧರಿಸಿ ವಾಹನ ಸಂಚಾರಕ್ಕೆ ನಿಷೇಧ ಹೇರಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಇದೇ ನವೆಂಬರ್ 7 ರಿಂದ 2021ರ ಫೆಬ್ರವರಿ 28ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯರಾತ್ರಿ 12ವರೆಗೆ ಚರ್ಚ್ ಸ್ಟ್ರೀಟ್‌ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಈ ಭಾಗದಲ್ಲಿ ವಾಹನ ಸಂಚಾರದ ದಟ್ಟಣೆಯಿಂದ ಹೆಚ್ಚಿನ ವಾಯು ಮಾಲಿನ್ಯ ಉಂಟಾಗುತ್ತಿತ್ತು. ಹೀಗಾಗಿ ಕ್ಲೀನ್ ಏರ್ ಸ್ಟ್ರೀಟ್ ಯೋಜನೆ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ಮೊದಲ ಹೆಜ್ಜೆ ಎನ್ನುವಂತೆ ಚರ್ಚ್ ಸ್ಟ್ರೀಟ್ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.