ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಾಗಿದ್ದು ಪ್ರವಾಸೋದ್ಯಮ ಚಟುವಟಿಕೆ ಆರಂಭಕ್ಕೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕ್ರಮಕೈಗೊಂಡಿದೆ.
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಪ್ರವಾಸಿತಾಣಗಳಲ್ಲಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ, ಜೂನ್ 10 ರಿಂದ ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬಹುದಾಗಿದೆ.
ವಾಹನಗಳ ಸಂಪೂರ್ಣ ಸ್ಯಾನಿ ಟೈಸ್ ಮಾಡಬೇಕು. ಪ್ರವಾಸಿಗರು ಮತ್ತು ಪ್ರವಾಸ ಮಾರ್ಗದರ್ಶಿಗಳು, ಚಾಲಕರು ಮಾಸ್ಕ್ ಧರಿಸಬೇಕು. ಹ್ಯಾಂಡ್ ಗ್ಲೌಸ್ ಸ್ಯಾನಿಟೈಸರ್ ಹೊಂದಿರಬೇಕು. ಶೇಕಡ 50ರಷ್ಟು ಪ್ರಯಾಣಿಕರು ಮಾತ್ರ ವಾಹನದಲ್ಲಿ ಇರಬೇಕು. ಅನಾರೋಗ್ಯ ಮತ್ತು 65 ವರ್ಷ ಮೇಲ್ಪಟ್ಟವರಿಗೆ ಪ್ರವಾಸ ನಿಷೇಧವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹವಾನಿಯಂತ್ರಿತ ಇಲ್ಲದ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಗಾಗಿ ನಿಗಮದ ಬುಕಿಂಗ್ ಕೌಂಟರ್, ಕೆಎಸ್ಸಾರ್ಟಿಸಿ ಅವತಾರ್ ಪೋರ್ಟಲ್, ರೆಡ್ ಬಸ್ ಪೋರ್ಟಲ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ದಕ್ಷಿ ಣಕನ್ನಡ ದೇವಾಲಯಗಳು, ಬೆಂಗಳೂರು, ಮೈಸೂರು ನಗರ, ಮಡಿಕೇರಿ, ನಾಗರಹೊಳೆ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.