ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಮುಂದಾದ ಯುವಕನಿಗೆ ಇದೇ ತಲೆ ನೋವಾಗಿದೆ. ಮೋಸಗಾರ್ತಿ ಮಹಿಳೆ ಕೈಗೆ ಸಿಕ್ಕ ಯುವಕ ಮದುವೆಯಾಗಿ ಪಶ್ಚಾತಾಪ ಪಡುವಂತಾಗಿದೆ. ಮೂರು ಮದುವೆಯಾಗಿದ್ದ ಮಹಿಳೆ ಯುವಕನಿಗೆ ಮೋಸ ಮಾಡಿ ನಾಲ್ಕನೇ ಮದುವೆಯಾಗಿದ್ದಾಳೆ.
ಘಟನೆ ಭೋಪಾಲ್ನ ಜಹಾಂಗೀರಾಬಾದ್ ನಲ್ಲಿ ನಡೆದಿದೆ. ಈಗ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಮೂರು ತಿಂಗಳ ಹಿಂದೆ ಯುವಕ ಬಡವರಿಗೆ ಆಹಾರ ನೀಡ್ತಿದ್ದನಂತೆ. ಈ ವೇಳೆ ಮಹಿಳೆ ಕರೆ ಬಂದಿದೆ. ರೇಷನ್ ನೀಡುವಂತೆ ಆಕೆ ಮನವಿ ಮಾಡಿದ್ದಾಳೆ. ಆಕೆಗೆ ಆಹಾರ ನೀಡಲು ಯುವಕ ಮನೆಗೆ ಹೋಗಿದ್ದಾನೆ. ಈ ವೇಳೆ ಯುವಕನ ಜೊತೆ ಫೋಟೋ ತೆಗೆಸಿಕೊಂಡ ಮಹಿಳೆ ಬ್ಲಾಕ್ಮೇಲ್ ಶುರು ಮಾಡಿದ್ದಾಳೆ. ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.
ಮದುವೆಯಾದ್ಮೇಲೆ ಮಹಿಳೆ ಬಣ್ಣ ಗೊತ್ತಾಗಿದೆ. ಆಕೆ ಈಗಾಗಲೇ ಮೂರು ಮದುವೆಯಾಗಿದ್ದಾಳೆಂಬುದು ಗೊತ್ತಾಗಿದೆ. ಮೂವರಿಗೂ ಮಹಿಳೆ ಬ್ಲಾಕ್ಮೇಲ್ ಮಾಡ್ತಿದ್ದಳಂತೆ. ಅವ್ರಿಂದ ಹಣ ಕೀಳ್ತಿದ್ದಳಂತೆ.