alex Certify 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ: ನೋಂದಣಿ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ: ನೋಂದಣಿ ಕುರಿತು ಇಲ್ಲಿದೆ ಮಾಹಿತಿ

ಮೇ 1ನೇ ತಾರೀಖಿನ ಬಳಿಕ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ದೇಶದಲ್ಲಿ ಕೊರೊನಾ ಲಸಿಕೆ ಪಡೆಯಲು ಅರ್ಹರು. ತಮ್ಮ ಲಸಿಕೆಗಳಿಗಾಗಿ ಅರ್ಹರು ಶನಿವಾರದಿಂದ ಕೋವಿನ್​ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಸೇರಂ ಇನ್​ಸ್ಟಿಟ್ಯೂಟ್​ನ ಕೋವಿಶೀಲ್ಡ್ ಹಾಗೂ ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​ ಜೊತೆಯಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಕೂಡ ಶೀಘ್ರದಲ್ಲೇ ದೇಶದಲ್ಲಿ ಬಳಕೆಯಾಗಲಿದೆ.

ಕೊರೊನಾ ಲಸಿಕೆಗೆ ಅರ್ಹ ಫಲಾನುಭವಿಗಳು ಕೋವಿನ್​ ವೆಬ್​ಸೈಟ್​ ಹಾಗೂ ಆರೋಗ್ಯ ಸೇತು ಅಪ್ಲಿಕೇಶನ್​ ಮೂಲಕ ಲಸಿಕೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕೋವಿನ್​ ಅಪ್ಲಿಕೇಶನ್​ನಲ್ಲಿ ಲಸಿಕೆ ನೋಂದಣಿ ಮಾಡಲು ಈ ಮಾರ್ಗ ಅನುಸರಿಸಿ :

ಕೋವಿನ್​ ವೆಬ್​ಸೈಟ್​ ಓಪನ್​ ಮಾಡಿ ಸೈನ್​ ಇನ್​ ಆಗಿ.

ಮೊಬೈಲ್​ ಸಂಖ್ಯೆಯನ್ನ ನಮೂದಿಸಿ. ನಿಮಗೆ ಬಂದ ಒಟಿಪಿಯನ್ನ ಟೈಪ್​ ಮಾಡಿ ವೆರಿಫೈ ಕ್ಲಿಕ್ ಮಾಡಿ.

ರಿಜಿಸ್ಟರ್ ಫಾರ್​ ವ್ಯಾಕ್ಸಿನೇಷನ್​ ಪೇಜ್​ನಲ್ಲಿ ಕೇಳಲಾಗುವ ಹೆಸರು, ಜನ್ಮ ದಿನಾಂಕ, ಫೋಟೋ ಸೇರಿದಂತೆ ಎಲ್ಲಾ ಮಾಹಿತಿಗಳನ್ನ ನಮೂದಿಸಿ. ರಿಜಿಸ್ಟರ್​ ಆಯ್ಕೆ ಮೇಲೆ ಕ್ಲಿಕ್​ ಮಾಡಿ.

ಒಮ್ಮೆ ನಿಮ್ಮ ನೋಂದಣಿ ಕಾರ್ಯ ಮುಗಿಯುತ್ತಿದ್ದಂತೆಯೇ ನಿಮಗೆ ದಿನಾಂಕ ನಿಗದಿ ಆಯ್ಕೆ ಸಿಗಲಿದೆ.

ನಿಮ್ಮ ಪಿನ್ ಕೋಡ್​ನ್ನು ಎಂಟರ್​ ಮಾಡಿ ಸರ್ಚ್ ಕೊಡಿ. ಈ ಪಿನ್​ ಕೊಡ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲಸಿಕಾ ಕೇಂದ್ರಗಳು ಪರದೆ ಮೇಲೆ ಕಾಣಿಸಲಿದೆ. ಇಲ್ಲಿ ದಿನಾಂಕ ಹಾಗೂ ಸಮಯ ಕ್ಲಿಕ್​ ಮಾಡಿ ಕನ್ಫರ್ಮ್ ಆಯ್ಕೆ ಕ್ಲಿಕ್​ ಮಾಡಿ.

ಒಮ್ಮೆ ಲಾಗಿನ್​ ಆದರೆ ನೀವು 4 ಮಂದಿಯನ್ನ ಲಸಿಕೆಗೆ ನೋಂದಾಯಿಸಬಹುದಾಗಿದೆ. ನಿಮ್ಮ ನೋಂದಣಿ ದಿನಾಂಕವನ್ನೂ ನೀವು ಸುಲಭವಾಗಿ ಬದಲಾಯಿಸಿಕೊಳ್ಳಬಹುದು.

ರೋಗ್ಯ ಸೇತು ಅಪ್ಲಿಕೇಶನ್​ನಲ್ಲಿ ಈ ಹಂತ ಅನುಸರಿಸುವ ಮೂಲಕ ಲಸಿಕೆಗೆ ನೋಂದಾಯಿಸಿಕೊಳ್ಳಿ :

ಆರೋಗ್ಯ ಸೇತು ಅಪ್ಲಿಕೇಶನ್​ನಲ್ಲಿ ಕೋವಿನ್​ ಟ್ಯಾಬ್​​ ಮೇಲೆ ಕ್ಲಿಕ್​​ ಮಾಡಿ.

ವ್ಯಾಕ್ಸಿನ್​ ರಿಜಿಸ್ಟ್ರೇಷನ್​​ ಆಯ್ಕೆ ಮಾಡಿ – ಫೋನ್​ ನಂಬರ್​​ ನಮೂದಿಸಿ – ಒಟಿಪಿ ಟೈಪ್​ ಮಾಡಿ.

ವೆರಿಫೈ ಮೇಲೆ ಕ್ಲಿಕ್​ ಮಾಡಿ – ಈಗ ನೀವು ರಿಜಿಸ್ಟ್ರೇಷನ್ ವ್ಯಾಕ್ಸಿನೇಷನ್​ ಪೇಜ್​ಗೆ ಬಂದಿದ್ದೀರಾ.

ಕೋವಿನ್​ ವೆಬ್​ಸೈಟ್​ನಲ್ಲಿ ಮಾಡಿದಂತೆಯೇ ಮುಂದಿನ ಆಯ್ಕೆಗಳನ್ನ ಕ್ಲಿಕ್​ ಮಾಡುತ್ತಾ ಹೋಗಿ.

ಪ್ರತಿಯೊಬ್ಬ ಪ್ರಜೆಯೂ ಕೊರೊನಾ ಲಸಿಕೆಯ ಎರಡು ಡೋಸ್​ಗಳನ್ನ ಹೊಂದಬೇಕು. ಕೋವ್ಯಾಕ್ಸಿನ್​ ಲಸಿಕೆಯ ಮೊದಲ ಡೋಸ್​ ಪಡೆದ 28 ರಿಂದ 42 ದಿನಗಳ ಒಳಗೆ ಎರಡನೇ ಡೋಸ್ ಪಡೆಯಬೇಕು.

ಕೋವಿಶೀಲ್ಡ್ ಮೊದಲ ಡೋಸ್​ ಪಡೆದವರು 28 ರಿಂದ 56 ದಿನಗಳ ಒಳಗೆ ಎರಡನೇ ಡೋಸ್​ ಹಾಕಿಸಿಕೊಳ್ಳಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...