alex Certify ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ ಕಾವೇರಿ ತಟದಲ್ಲಿರುವ ಗಾಳಿಬೋರ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ ಕಾವೇರಿ ತಟದಲ್ಲಿರುವ ಗಾಳಿಬೋರ್​….!

ಕರ್ನಾಟಕದ ನದಿಗಳು ಎಂದ ಕೂಡಲೇ ಮೊದಲು ನೆನಪಾಗೋದೇ ಕಾವೇರಿ. ಇದೇ ಕಾವೇರಿ ನದಿಯ ತಟದಲ್ಲಿ ಗಾಳಿಬೋರ್​ ಎಂಬ ಪ್ರಾಕೃತಿಕ ಶಿಬಿರವಿದ್ದು ನಿಸರ್ಗ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಈ ನಿಸರ್ಗ ರಮಣೀಯ ಸ್ಥಳವು ಬೆಂಗಳೂರಿನಿಂದ 110 ಕಿಲೋಮೀಟರ್​ ದೂರದಲ್ಲಿದೆ.

ಇದು ಅರ್ಕಾವತಿ ಹಾಗೂ ಕಾವೇರಿ ನದಿಗಳ ಸಂಗಮವಾಗಿದೆ. ಈ ಶಿಬಿರದ ಹಿಂದೆ ಗಾಳಿಬೋರ್​ ಎಂಬ ಹೆಸರಿನ ಬೆಟ್ಟವಿದೆ. ಇದೇ ಬೆಟ್ಟದ ಹೆಸರನ್ನ ಶಿಬಿರಕ್ಕೆ ಇಡಲಾಗಿದೆ. ಮೀನುಗಾರಿಕೆಗೆ ಇದೊಂದು ಬೆಸ್ಟ್​ ಪ್ಲೇಸ್​ ಆಗಿದ್ದು ಇಲ್ಲಿಗೆ ಬರುವ ಪ್ರವಾಸಿಗರೆಲ್ಲ ಗಾಳ ಹಾಕಿ ಮೀನು ಹಿಡಿಯುತ್ತಾರೆ. ಹೀಗಾಗಿ ಫಿಶ್ಶಿಂಗ್​ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ.

ಟಿಎ – ಡಿಎ ಏರಿಕೆ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೊಂದು ಮುಖ್ಯ ಮಾಹಿತಿ

ಇಲ್ಲಿ ನಿಮಗೆ ಮಾರ್ಜಾಲ ಮೀನು, ಕಾರ್ಪ್, ಮಶೇರ್​ ನಂತಹ ಅಪರೂಪದ ಮೀನುಗಳು ಕಾಣಸಿಗುತ್ತವೆ. ಮೀನುಗಳು ಮಾತ್ರವಲ್ಲದೇ 250ಕ್ಕೂ ಹೆಚ್ಚು ಬಗೆಯ ತರಹೇವಾರಿ ಪಕ್ಷಿಗಳನ್ನೂ ನೀವು ಕಣ್ತುಂಬಿಕೊಳ್ಳಬಹುದಾಗಿದೆ. ಮೀನು , ಪಕ್ಷಿಗಳ ಜೊತೆಯಲ್ಲಿ ನೀವು ಮಲಬಾರ್​ ದೈತ್ಯ ಅಳಿಲು, ಆನೆ, ಚಿರತೆಯಂತಹ ಪ್ರಾಣಿಗಳನ್ನೂ ಕಾಣಬಹುದು.

ಪಕ್ಷಿ – ಪ್ರಾಣಿ ಪ್ರಿಯರು, ಚಾರಣ ಪ್ರಿಯರು ಜೂನ್​ – ಆಗಸ್ಟ್​​ ತಿಂಗಳಲ್ಲಿ ಈ ಶಿಬಿರಕ್ಕೆ ಭೇಟಿ ನೀಡಬಹುದಾಗಿದೆ. ಫಿಶ್ಶಿಂಗ್​ ಪ್ರಿಯರು ಏಪ್ರಿಲ್,​ ಮೇ ತಿಂಗಳಲ್ಲಿ ಭೇಟಿ ನೀಡೋದು ಹೆಚ್ಚು ಸೂಕ್ತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...